Menu

Union Budget 2026-27: ಆದಾಯ ತೆರಿಗೆ ಅರ್ಜಿ ಸಲ್ಲಿಕೆ ಸರಳೀಕರಣ, ನೇರ ತೆರಿಗೆ ಪದ್ಧತಿ ಏಪ್ರಿಲ್‌ 1ರಿಂದ ಜಾರಿ

1961ರಿಂದ ದೇಶದಲ್ಲಿ ಅನ್ವಯಿಸಲಾಗುತ್ತಿದ್ದ ತೆರಿಗೆ ಪದ್ಧತಿ ಕೈ ಬಿಡಲಾಗಿದ್ದು, 2026 ಏಪ್ರಿಲ್‌ 1ರಿಂದ ನೂತನ ತೆರಿಗೆ ಪದ್ಧತಿ ಜಾರಿಗೆ ಬರಲಿದೆ ಎಂದು ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಹೊಸ ಆದಾಯ ತೆರಿಗೆ ಕಾಯ್ದೆ ಬಗ್ಗೆ ಮಾತನಾಡಿದ ಅವರು, ಸರಳೀಕೃತ ಆದಾಯ ತೆರಿಗೆ ನಿಯಮಗಳು ಮತ್ತು ನಮೂನೆಗಳನ್ನು ಶೀಘ್ರದಲ್ಲೇ ಅಧಿಸೂಚಿಸಲಾಗುವುದು ಎಂದರು.

ಕಳೆದ ಏಪ್ರಿಲ್‌ ನಲ್ಲಿ ಮಂಡಿಸಿದ ನೂತನ ನೇರ ತೆರಿಗೆ ಪದ್ಧತಿ 2026 ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಹಿಂದೆ ಇದ್ದ ತೆರಿಗೆ ಅರ್ಜಿ ಸಲ್ಲಿಕೆ ನಮೂನೆ ಕಠಿಣವಾಗಿದ್ದು, ಅರ್ಜಿ ಸಲ್ಲಿಕೆಯನ್ನು ಸರಳೀಕರಣಗೊಳಿಸಿ ತೆರಿಗೆದಾರರಿಗೆ ಇದ್ದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದಿದ್ದಾರೆ.

ತೆರಿಗೆ ಪಾವತಿಸಲು ಜುಲೈ 31 ಕೊನೆಯ ದಿನವಾಗಿದ್ದು, ತೆರಿಗೆ ಪಾವತಿ ಬಾಕಿ ಉಳಿಸಿಕೊಂಡರೆ ಶೇ.೧೦೦ರಷ್ಟು ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಪಡಿಸುವ ನಿಯಮ ಜಾರಿಗೆ ಬರಲಿದೆ. ಸಣ್ಣ ತೆರಿಗೆ ಪಾವತಿದಾರರಿಗೆ ಸಣ್ಣ ಪ್ರಮಾಣದಲ್ಲಿ ದಂಡ ವಿಧಿಸಲಾಗುವುದು. ವಿದೇಶಿ ಪ್ರವಾಸಿಗರಿಗೆ ತೆರಿಗೆ ಹೊರೆ ಇರುವುದಿಲ್ಲ. ವಿದೇಶಿ ಪ್ರಯಾಣಕ್ಕಾಗಿ ಟಿಸಿಎಸ್ ದರವನ್ನು ಶೇ. 5 ಕ್ಕೆ ಇಳಿಸಲಾಗಿದೆ, ಜುಲೈ 31 ರವರೆಗೆ ರಿಟರ್ನ್ಸ್ ಸಲ್ಲಿಸಬಹುದು. ಈ ಕಾನೂನು ಅಘೋಷಿತ ಆದಾಯವನ್ನು ಒಂದು ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಲು ಪ್ರಸ್ತಾಪಿಸು ತ್ತದೆ ಎಂದು ಸಚಿವೆ ತಿಳಿಸಿದ್ದಾರೆ.

ಮೋಟಾರು ವಾಹನ ಅಪಘಾತದಲ್ಲಿ ಮೃತಪಟ್ಟವರರು ಪಡೆಯುವ ವಿಮಾ ಹಣದಲ್ಲಿ ಕಡಿತ ಮಾಡಲಾಗುತ್ತಿದ್ದ ತೆರಿಗೆಯನ್ನು ರದ್ದುಗೊಳಿಸಲಾಗಿದೆ. ಸೋಲಾರ್‌ ಗ್ಲಾಸ್‌ನ ಉತ್ಪಾದನೆಯನ್ನು ಉತ್ತೇಜಿಸಲು ಸೌರ ಗಾಜಿನ ತಯಾರಿಕೆಯಲ್ಲಿ ಬಳಸುವ ಸೋಡಿಯಂ ಆಂಟಿಮೊನೇಟ್ ಆಮದಿನ ಮೇಲೆ ಸುಂಕವನ್ನು ರದ್ದುಪಡಿಸ ಲಾಗಿದೆ.

ಭಾರತದಲ್ಲಿ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುವ ಮೂಲಕ ಕ್ಲೌಡ್ ಸೇವೆಗಳನ್ನು ಒದಗಿಸುವ ಯಾವುದೇ ವಿದೇಶಿ ಕಂಪನಿಗೆ 2047 ರವರೆಗೆ ತೆರಿಗೆ ರಜೆ ಘೋಷಿಸಲಾಗಿದೆ. ಭಾರತದಿಂದ ದತ್ತಾಂಶ ಸೇವೆಗಳನ್ನು ಒದಗಿಸುವ ಸಂಸ್ಥೆಯು ಸಂಬಂಧಿತ ಘಟಕವಾಗಿದ್ದರೆ, ವೆಚ್ಚದಲ್ಲಿ ಶೇ. 15 ಸುರಕ್ಷಿತ ಆಶ್ರಯವನ್ನು ಒದಗಿಸಲು ಸರ್ಕಾರ ಪ್ರಸ್ತಾಪಿಸುತ್ತದೆ. ಆಡಿಟ್ ಮಾಡದ ವ್ಯವಹಾರ ಪ್ರಕರಣಗಳು ಮತ್ತು ಟ್ರಸ್ಟ್‌ಗಳು ಆಗಸ್ಟ್ 31 ರವರೆಗೆ ರಿಟರ್ನ್ಸ್ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

ರಫ್ತಿಗಾಗಿ ಸಮುದ್ರ ಆಹಾರವನ್ನು ಸಂಸ್ಕರಿಸಲು ಬಳಸುವ ಆಯ್ದ ಪರಿಕರಗಳ ಮೇಲಿನ ತೆರಿಗೆ ರಹಿತ ಆಮದು ಮಿತಿಯನ್ನು ಹಿಂದಿನ ವಹಿಂದಿನ ವರ್ಷದ ರಫ್ತು ವಹಿವಾಟಿನ ಶೇ.1 ರಿಂದ ಶೇ.3 ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಚರ್ಮ ಅಥವಾ ಸಂಶ್ಲೇಷಿತ ಪಾದರಕ್ಷೆಗಳ ರಫ್ತಿಗೆ ಲಭ್ಯವಿರುವ ಆಯ್ದ ಪರಿಕರಗಳ ಮೇಲಿನ ತೆರಿಗೆ ರಹಿತ ಆಮದು ಸೌಲಭ್ಯವನ್ನು ಇನ್ನು ಮುಂದೆ ಶೂ ಅಪ್ಪರ್ಸ್‌ಗಳ ರಫ್ತಿನ ವಿಸ್ತರಣೆಗೂ ಅನ್ವಯಸುವುದಾಗಿ ಹೇಳಿದ್ದಾರೆ.  ಫ್ಯೂಚರ್ಸ್ ಮತ್ತು ಆಪ್ಷನ್ಸ್ ಮೇಲಿನ ಭದ್ರತಾ ವಹಿವಾಟು ತೆರಿಗೆ ( STT) ಹೆಚ್ಚಳ ಪ್ರಸ್ತಾಪಿಸಿದ್ದು, ಫ್ಯೂಚರ್ಸ್ ಮೇಲಿನ ಎಸ್‌ಟಿಟಿಯನ್ನು 0.02% ರಿಂದ 0.05% ಕ್ಕೆ ಹೆಚ್ಚಿಸಲು ಕೇಂದ್ರ ಮುಂದಾಗಿದೆ.

 

Related Posts

Leave a Reply

Your email address will not be published. Required fields are marked *