Menu

Union Budget 2026-27: ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ. ಹಣಕಾಸು ಆಯೋಗದ ಅನುದಾನ ಘೋಷಣೆ

ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ.ಗಳನ್ನು 2027ನೇ ವಿತ್ತೀಯ ವರ್ಷಕ್ಕೆ ಹಣಕಾಸು ಆಯೋಗದ ಅನುದಾನವಾಗಿ ಒದಗಿಸಲಾಗಿದ್ದು, ಹಣಕಾಸು ಕೊರತೆಯನ್ನು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 4.5 ಕ್ಕಿಂತ ಕಡಿಮೆ ಮಾಡುವ 2022 ನೇ  ಹಣಕಾಸು ವರ್ಷದಲ್ಲಿ ಪ್ರಕಟಿಸಿದ ಬದ್ಧತೆಯನ್ನು ಈಡೇರಿಸಲಾಗಿದೆ ಎಂದು ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಹೊಸ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಿದ್ದು, ಆದಾಯ ತೆರಿಗೆ ನಮೂನೆಗಳನ್ನು ಸರಳೀಕರಿಸಲಾಗುವುದು, ಹೊಸ ಕಾನೂನು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ ಎಂದಿದ್ದಾರೆ. ವಿದೇಶಿ ಪ್ರಯಾಣದ ಮೇಲಿನ ತೆರಿಗೆಗಳನ್ನು ಕಡಿಮೆಗೊಳಿಸಲಾಗಿದೆ.

ವಿದೇಶಿ ಪ್ರಯಾಣಕ್ಕಾಗಿ ಟಿಸಿಎಸ್ ದರವನ್ನು ಶೇ. 5 ಕ್ಕೆ ಇಳಿಸಲಾಗಿದೆ, ಜುಲೈ 31 ರವರೆಗೆ ರಿಟರ್ನ್ಸ್ ಸಲ್ಲಿಸಬಹುದು. ಈ ಕಾನೂನು ಅಘೋಷಿತ ಆದಾಯವನ್ನು ಒಂದು ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಲು ಪ್ರಸ್ತಾಪಿಸು ತ್ತದೆ ಎಂದು ಸಚಿವೆ ತಿಳಿಸಿದ್ದಾರೆ. 2025 ಹಾಗೂ 26ರ ಪರಿಷ್ಕೃತ ಅಂದಾಜಿನ ಪ್ರಕಾರ, ಹಣಕಾಸಿನ ಕೊರತೆಯು ಒಟ್ಟು ದೇಶೀಯ ಉತ್ಪನ್ನದ (GDP) ಶೇ. 4.4 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಯಾವುದೇ ಮೊತ್ತದ ನಿರ್ಬಂಧವಿಲ್ಲದೆ ವಿದೇಶ ಪ್ರವಾಸ ಪ್ಯಾಕೇಜ್‌ಗಳ ಮಾರಾಟದ ಮೇಲಿನ ಟಿಸಿಎಸ್ ದರವನ್ನು ಪ್ರಸ್ತ ಪ್ರಸ್ತುತ 5% ಮತ್ತು 20% ರಿಂದ 2% ಕ್ಕೆ ಇಳಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.  ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶ ಗಳನ್ನು ಮುಂದುವರಿಸಲು ಟಿಸಿಎಸ್ ದರವನ್ನು 5% ರಿಂದ ರಿಂದ 2% ಕ್ಕೆ ಇಳಿಸಲು ಮುಂದಾಗಿರುವುದಾಗಿ ಹೇಳಿದ್ದಾರೆ.

ಭಾರತದಲ್ಲಿ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುವ ಮೂಲಕ ಕ್ಲೌಡ್ ಸೇವೆಗಳನ್ನು ಒದಗಿಸುವ ಯಾವುದೇ ವಿದೇಶಿ ಕಂಪನಿಗೆ 2047 ರವರೆಗೆ ತೆರಿಗೆ ರಜೆ ಘೋಷಿಸಲಾಗಿದೆ. ಭಾರತದಿಂದ ದತ್ತಾಂಶ ಸೇವೆಗಳನ್ನು ಒದಗಿಸುವ ಸಂಸ್ಥೆಯು ಸಂಬಂಧಿತ ಘಟಕವಾಗಿದ್ದರೆ, ವೆಚ್ಚದಲ್ಲಿ ಶೇ. 15 ಸುರಕ್ಷಿತ ಆಶ್ರಯವನ್ನು ಒದಗಿಸಲು ಸರ್ಕಾರ ಪ್ರಸ್ತಾಪಿಸುತ್ತದೆ. ಆಡಿಟ್ ಮಾಡದ ವ್ಯವಹಾರ ಪ್ರಕರಣಗಳು ಮತ್ತು ಟ್ರಸ್ಟ್‌ಗಳು ಆಗಸ್ಟ್ 31 ರವರೆಗೆ ರಿಟರ್ನ್ಸ್ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

ರಫ್ತಿಗಾಗಿ ಸಮುದ್ರ ಆಹಾರವನ್ನು ಸಂಸ್ಕರಿಸಲು ಬಳಸುವ ಆಯ್ದ ಪರಿಕರಗಳ ಮೇಲಿನ ತೆರಿಗೆ ರಹಿತ ಆಮದು ಮಿತಿಯನ್ನು ಹಿಂದಿನ ವಹಿಂದಿನ ವರ್ಷದ ರಫ್ತು ವಹಿವಾಟಿನ ಶೇ.1 ರಿಂದ ಶೇ.3 ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಚರ್ಮ ಅಥವಾ ಸಂಶ್ಲೇಷಿತ ಪಾದರಕ್ಷೆಗಳ ರಫ್ತಿಗೆ ಲಭ್ಯವಿರುವ ಆಯ್ದ ಪರಿಕರಗಳ ಮೇಲಿನ ತೆರಿಗೆ ರಹಿತ ಆಮದು ಸೌಲಭ್ಯವನ್ನು ಇನ್ನು ಮುಂದೆ ಶೂ ಅಪ್ಪರ್ಸ್‌ಗಳ ರಫ್ತಿನ ವಿಸ್ತರಣೆಗೂ ಅನ್ವಯಸುವುದಾಗಿ ಹೇಳಿದ್ದಾರೆ.

ಫ್ಯೂಚರ್ಸ್ ಮತ್ತು ಆಪ್ಷನ್ಸ್ ಮೇಲಿನ ಭದ್ರತಾ ವಹಿವಾಟು ತೆರಿಗೆ ( STT) ಹೆಚ್ಚಳ ಪ್ರಸ್ತಾಪಿಸಿದ್ದು, ಫ್ಯೂಚರ್ಸ್ ಮೇಲಿನ ಎಸ್‌ಟಿಟಿಯನ್ನು 0.02% ರಿಂದ 0.05% ಕ್ಕೆ ಹೆಚ್ಚಿಸಲು ಕೇಂದ್ರ ಮುಂದಾಗಿದೆ.

Related Posts

Leave a Reply

Your email address will not be published. Required fields are marked *