Menu

Union Budget 2026-27: 20 ಹೊಸ ರಾಷ್ಟ್ರೀಯ ಜಲಮಾರ್ಗ, ಏಳು ಹೈಸ್ಪೀಡ್ ರೈಲು ಕಾರಿಡಾರ್‌

ಹಣಕಾಸು  ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಮುಂದಿನ ಐದು ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲು ಸರ್ಕಾರ ಯೋಜಿಸಿದೆ.

ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಣೆ ಮಾಡಲಾಗಿದೆ. ಅವುಗಳೆಂದರೆ ಮುಂಬೈ-ಪುಣೆ, ಪುಣೆಯಿಂದ ಹೈದರಾಬಾದ್, ಹೈದರಾಬಾದ್‌ನಿಂದ ಬೆಂಗಳೂರು, ಹೈದರಾಬಾದ್‌ನಿಂದ ಚೆನ್ನೈ, ಚೆನ್ನೈನಿಂದ ಬೆಂಗಳೂರು, ಬೆಂಗಳೂರಿನಿಂದ ವಾರಣಾಸಿ, ವಾರಣಾಸಿಯಿಂದ ಸಿಲಿಗುರಿಗಳಿಗೆ ಈ ರೈಲುಗಳು ಓಡಲಿವೆ.

ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವ ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ಮತ್ತು REC ಲಿಮಿಟೆಡ್ (ಹಿಂದೆ ಗ್ರಾಮೀಣ ವಿದ್ಯುದೀಕರಣ ನಿಗಮ)ಗಳ ಪುನರ್‌ ರಚಿಸಲು ಬಜೆಟ್‌ನಲ್ಲಿ ಪ್ರಸ್ತಾಪವನ್ನು ಮಂಡಿಸಲಾಗಿದೆ.

1,500 ಮಾಧ್ಯಮಿಕ ಶಾಲೆಗಳು ಹಾಗೂ 500 ಕಾಲೇಜುಗಳಲ್ಲಿ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (A(ABGC) ವಿಷಯ ರಚನೆ ಪ್ರಯೋಗಾಲಯಗಳನ್ನು ಸ್ಥಾಪಿಸುವ ಯೋಜನೆ, ‘ಖೇಲೋ ಇಂಡಿಯಾ ಮಿಷನ್’ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಅನಿಮೇಷನ್, ದೃಶ್ಯ ಪರಿಣಾಮಗಳು ಮತ್ತು ಗೇಮಿಂಗ್ ವಲಯವು ಬೆಳೆಯುತ್ತಿರುವ ಉದ್ಯಮವಾಗಿದ್ದು,  ದೇಶಾದ್ಯಂತ ಪ್ರಯೋಗಾಲಯಗಳನ್ನು ಸ್ಥಾಪಿಸಲು ಮುಂಬೈನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್‌ಗೆ  ಬೆಂಬಲ ಘೋಷಣೆಯಾಗಿದೆ.

ಉತ್ತರ ಭಾರತದ ಜಾಮ್‌ ನಗರದಲ್ಲಿ ವಿಶ್ವ ಆರೋಗ್ಯ ಕೇಂದ್ರ ಹಾಗೂ   ರಾಂಚಿ ಸೇರಿ ಎರಡು ಕಡೆ  ನಿಮ್ಹಾನ್ಸ್‌ ಆಸ್ಪತ್ರೆಗಳ ನಿರ್ಮಾಣ ಘೋಷಿಸಲಾಗಿದೆ.

Related Posts

Leave a Reply

Your email address will not be published. Required fields are marked *