ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮಾರ್ಚ್ 16ರಿಂದ 20ರವರೆಗೆ ಯುಗಾದಿ ಮಹೋತ್ಸವ ಆಚರಣೆ ನಡೆಯಲಿದ್ದು, ಉತ್ಸವ ಪ್ರಾರಂಭವಾಗುವ ಮೊದಲು ಮಾರ್ಚ್ 06ರಿಂದ 15ರವರೆಗೆ ಪ್ರತಿದಿನ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಹಂತಗಳಾಗಿ ಮಲ್ಲಿಕಾರ್ಜುನ ಸ್ವಾಮಿಯ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಪೋತುಗುಂಟ ರಮೇಶ್ ನಾಯುಡು ತಿಳಿಸಿದ್ದಾರೆ.
ಯುಗಾದಿ ಮಹೋತ್ಸವ ವೇಳೆ ಎಲ್ಲಾ ಭಕ್ತರಿಗೆ ಶ್ರೀಮಲ್ಲಿಕಾರ್ಜುನ ಅಲಂಕಾರದ ದರ್ಶನ ಮಾತ್ರ ಒದಗಿಸಲಾಗುವುದು. ಹಬ್ಬದ ದಿನಗಳಲ್ಲಿ ಭಗವಂತನ ಸ್ಪರ್ಶ ದರ್ಶನ ಅವಕಾಶವಿರುವುದಿಲ್ಲ. ಯುಗಾದಿ ಹಬ್ಬದ ವೇಳೆ 7 ಲಕ್ಷದಿಂದ 8 ಲಕ್ಷ ಭಕ್ತರು ಶ್ರೀಶೈಲ ಕ್ಷೇತ್ರವನ್ನು ಸಂದರ್ಶಿಸಬಹುದೆಂಬ ನಿರೀಕ್ಷೆಯಿದೆ.
ಕರ್ನಾಟಕದಿಂದ ವಿಶೇಷವಾಗಿ ಉತ್ತರ ಕರ್ನಾಟಕ ಪ್ರದೇಶದಿಂದ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ, ಮತ್ತು ಸಾಂಗ್ಲಿಗಳಿಂದ ಹೆಚ್ಚಿನ ಸಂಕ್ಯೆಯ ಭಕ್ತರು ಶ್ರೀಶೈಲಕ್ಕೆ ಬರುತ್ತಾರೆ. ಸ್ಪರ್ಶ ದರ್ಶನದ ಟಿಕೆಟ್ ದರ 500 ರೂ. ನಿಗದಿಪಡಿಸಲಾಗಿದೆ. ಪ್ರತಿ ಹಂತದಲ್ಲಿ ಬುಕಿಂಗ್ ಮೂಲಕ 1,500 ಟಿಕೆಟ್ಗಳನ್ನು ನೀಡಲಾಗುವುದು. 500 ಟಿಕೆಟ್ ಆನ್ಲೈನ್ನಲ್ಲಿ ಲಭ್ಯವಿರುತ್ತದೆ. ಆನ್ಲೈನ್ ಟಿಕೆಟ್ಗಳನ್ನು www.srisaila devasthanam.org ಅಥವಾ www.aptemples.ap.gov.in ನಿಂದ ಪಡೆಯಬಹುದು. ಸ್ಪರ್ಶ ದರ್ಶನ ಟಿಕೆಟ್ ಮನಮಿತ್ರ ವಾಟ್ಸಾಪ್ ಗವರ್ನೆನ್ಸ್ 8552300009 ಮೂಲಕವೂ ಪಡೆಯಬಹುದಾಗಿದೆ.


