ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಪ್ರದರ್ಶನ ಮಾಡಿದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಬಮ್ಮನಟ್ಟಿ ಗ್ರಾಮದ ನಿವಾಸಿ ಹಾಲಪ್ಪ ದ್ಯಾಮಪ್ಪ ಕಾಟಾಬಳಿ, ಹುಕ್ಕೇರಿ ತಾಲೂಕಿನ ಚಿಕಲದಿನ್ನಿ ಗ್ರಾಮದ ನಾಗರಾಜ ದ್ಯಾಮಪ್ಪ ಕಟಾಬಳಿ(21) ಬಂಧಿತ ಯುವಕರು.
ಹಾಲಪ್ಪ ಹಾಗೂ ದ್ಯಾಮಪ್ಪ ಶಹಬಂದರ ಕ್ರಾಸ್‌ನ ವಾಲ್ಮೀಕಿ ಸರ್ಕಲ್ ಬಳಿ ಕೈಯಲ್ಲಿ ತಲ್ವಾರ್ ಹಿಡಿದು ಓಡಾಡಿದ್ದರು. ಸಾರ್ವಜನಿಕರನ್ನು ನಿಂದಿಸಿ, ಭಯದ ವಾತಾವರಣ ಹುಟ್ಟಿಸಿದ್ದರು ಎನ್ನಲಾಗಿದೆ. ವಿಷಯ ತಿಳಿದ ಯಮಕನಮರಡಿ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.