ಚಿತ್ರದುರ್ಗದ ಗ್ರಾಮಾಂತರ ಠಾಣೆ ಬಳಿ ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಯಾಸಿನ್ (22), ಅಲ್ತಾಫ್ (22) ಮೃತ ವಿದ್ಯಾರ್ಥಿಗಳು.
ಮೃತ ವಿದ್ಯಾರ್ಥಿಗಳುಕೇರಳ ಮೂಲದವರಾಗಿದ್ದು, ನರ್ಸಿಂಗ್ ಓದುತ್ತಿದ್ದರು. ಘಟನೆ ಸಂಬಂಧ ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಪೊಲೀಸರು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ನೀಡಬೇಕಿದೆ.