ವಿಜಯನಗರ: ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಐತಿಹಾಸಿಕ ವಿಜಯನಗರ ಹೂವಿನಗಡಗಲಿಯ ಮೈಲಾಂಗಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ದೈವವಾಣಿ ನುಡಿದಿದೆ.
ಶನಿವಾರ ನಡೆದ ಕಾರ್ಣಿಕೋತ್ಸವದಲ್ಲಿ ದೈವವಾಣಿ ನುಡಿದಿದ್ದು, ಇದು ಮುಂದಿನ ರಾಜ್ಯ ರಾಜಕೀಯದ ಕುರಿತ ನಿಗೂಢ ವಾಣಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ತುಂಬಿದ ಕೊಡ ತುಳುಕಿತಲೈ ಪರಾಕ್ ಎಂದರೇ ರಾಜ್ಯದಲ್ಲಿ ಸರ್ಕಾರ ತುಂಬಿದ ಕೊಡ ರೀತಿಯಲ್ಲಿದೆ. ಸರ್ಕಾರ ಬದಲಾವಣೆಯ ಯಾವುದೇ ಅವಕಾಶವಿಲ್ಲ. ಶಾಸಕರು ಒಗ್ಗಟ್ಟಾಗಿದ್ದರೆ ನಾಯಕತ್ವ ಬದಲಾವಣೆ ಇಲ್ಲ. ಆದರೆ ಶಾಸಕರು ನಿಲುವು ಬದಲಿಸಿದರೆ ನಾಯಕತ್ವ ಬದಲಾಗಬಹದು ಎಂದು ದೇವಸ್ಥಾನದ ಧರ್ಮದರ್ಶ ವೆಂಕಪ್ಪಯ್ಯ ವಿಶ್ಲೇಷಿಸಿದ್ದಾರೆ.
ಸಾಮಾನ್ಯವಾಗಿ ಕಾರ್ಣಿಕದಲ್ಲಿ ದೈವವಾಣಿ ಪ್ರಕೃತಿಗೆ ಸಂಬಂಧಪಟ್ಟಿದ್ದು, ತುಂಬಿದ ಕೊಡ ತುಳುಕಿತಲೇ ಎಂದರೆ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ಭರ್ತಿಯಾಗಿ ರೈತರು ಉತ್ತಮ ಬೆಳೆ ಬೆಳೆಯಬಹುದು ಎಂದು ಹೇಳಲಾಗಿದೆ. ಆದರೆ ಈ ಬಾರಿ ರಾಜಕೀಯ ವಿಷಯ ಪ್ರಸ್ತಾಪಿಸಿದ್ದು ಅಚ್ಚರಿ ಮೂಡಿಸಿದೆ.