`ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂದು ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ಭವಿಷ್ಯ ನುಡಿಯುವ ಮೂಲಕ ರೈತರಲ್ಲಿ ಹರ್ಷ ಮೂಡಿಸಿದ್ದಾರೆ.
ವಿಜಯಪುರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ರಾಮಣ್ಣ ಗೊರವಯ್ಯ ತುಂಬಿದ ಕೊಡ ತುಳುಕಿತಲೇ ಪಾರಕ್ ಎಂದು ಹೇಳಿದ್ದಾರೆ.
ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದರೆ ಈ ವರ್ಷದ ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಜೊತೆಗೆ ರಾಜಕೀಯ ಮತ್ತು ರಾಜ್ಯ ಸರ್ವ ಸುಖದಿಂದ ಬಾಳಿತು ಎಂಬ ಅರ್ಥ ಇದಾಗಿದೆ.
ಈ ಬಾರಿಯೂ ರಾಜ್ಯದಲ್ಲಿ ಉತ್ತಮ ಮಳೆ ಆಗಲಿದ್ದು, ಬೆಳೆ ಕೂಡ ರೈತರಿಗೆ ಸಿಗಲಿದೆ. ಇದೇ ವೇಳೆ ರಾಜ್ಯದಲ್ಲಿ ಕಾಡುತ್ತಿರುವ ರಾಜಕೀಯ ಬೆಳವಣಿಗಳಿಗೆ ಕಡಿವಾಣ ಬೀಳಲಿದ್ದು, ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂಬುದು ಗೊರವಯ್ಯಾ ಭವಿಷ್ಯದ ತಾತ್ಪರ್ಯ ಎಂದು ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದ್ದಾರೆ.
ಜಾತ್ರೆಯ ಕೊನೆಯ ದಿನ ಗೊರವಯ್ಯಾ ವೇಷಧಾರಿ ಕಂಬದ ಮೇಲೇರಿ ಭವಿಷ್ಯವಾಣಿ ನುಡಿಯುತ್ತಿದ್ದಂತೆ ಮೇಲಿಂದ ಕೆಳಗೆ ಬೀಳುತ್ತಾರೆ. ಗೊರವಯ್ಯಾ ಕಂಬದ ಮೇಲೇರುತ್ತಿದ್ಧಂತೆ ಎಲ್ಲರೂ ಮೌನಕ್ಕೆ ಜಾರಲಿದ್ದು, ನಿಶ್ಯಬ್ಧ ವಾತವರಣ ನಿರ್ಮಾಣವಾಗುತ್ತದೆ.