ಭಾರತ ಅಥವಾ ಬೇರೆ ಎಲ್ಲಿಯೇ ಆದರೂ ಐಫೋನ್ ತಯಾರಿಸಿ ಅಮೆರಿಕದಲ್ಲಿ ಮಾರಿದರೆ 25% ಸುಂಕವನ್ನು ವಿಧಿಸಲಾಗುವುದು. ನಾನು ಆಪಲ್ ಸಿಇಒ ಟಿಮ್ ಕುಕ್ಗೆ ಬಹಳ ಹಿಂದೆಯೇ ಈ ವಿಷಯ ತಿಳಿಸಿದ್ದೇನೆ. ಆಪಲ್ ಫೋನ್ಗಳು ಅಮೆರಿಕದಲ್ಲೇ ತಯಾರಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪಲ್ ಕಂಪನಿಗೆ ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ಐಫೋನ್ ಫ್ಯಾಕ್ಟರಿ ತೆರೆಯಬೇಡಿ ಎಂದು ಟ್ರಂಪ್ ಎರಡನೇ ಬಾರಿಗೆ ಹೇಳಿದ್ದಾರೆ. ಭಾರತ ಅಥವಾ ಬೇರೆಲ್ಲಿಯಾದರೂ ತಯಾರಿಸಿದ ಐಫೋನ್ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿದರೆ 25% ಸುಂಕವನ್ನು ಪಾವತಿಸಬೇಕಾಗುತ್ತದೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್ಗಳನ್ನು ಅಮೆರಿಕದಲ್ಲಿ ತಯಾರಿಸಬೇಕು ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಹಾಳಾಗುತ್ತಿದ್ದ ಬೆನ್ನಲ್ಲೇ ಆಪಲ್ ಭಾರತದಲ್ಲಿ ಐಫೋನ್ ಉತ್ಪಾದನಾ ಘಟಕಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಟ್ರಂಪ್ ಹೀಗೆ ವಾರ್ನ್ ಮಾಡಿದ್ದಾರೆ. ಭಾರತ ಮತ್ತೊಂದು ಚೀನಾ ಆಗುವುದು ಬೇಡ. ಆಪಲ್ ಭಾರತದಲ್ಲಿ ಹೂಡಿಕೆ ಮಾಡುವ ಅಗತ್ಯವಿಲ್ಲ. ಆಪಲ್ ಅಮೆರಿಕದಲ್ಲಿ ಹೂಡಿಕೆ ಮಾಡಬೇಕು. ಇಲ್ಲಿನ ಜನರಿಗೆ ಉದ್ಯೋಗ ನೀಡಬೇಕು ಎಂದು ಈ ಹಿಂದೊಮ್ಮೆ ಟ್ರಂಪ್ ಹೇಳಿದ್ದರು.