Menu

ಹರ್ಮುಜ್‌ ತೆರೆಯುವಂತೆ ಟ್ರಂಪ್‌ ಬೆದರಿಕೆ: ನಷ್ಟ ತುಂಬಿ ಕೊಡಿ ಎಂದ ಇರಾನ್‌

ಇಸ್ರೇಲ್‌- ಅಮೆರಿಕ ಮಾಡಿರುವ ದಾಳಿಗಳಿಂದ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡದಿದ್ದಲ್ಲಿ ಹರ್ಮುಜ್‌ ಜಲಸಂಧಿ ತೆರೆಯುವ ಮಾತೇ ಇಲ್ಲ ಎಂದು ಇರಾನ್ ಹೊಸ  ಷರತ್ತುಗಳನ್ನು ಅಮೆರಿಕದ ಮುಂದಿಟ್ಟಿದೆ.

ಒಪ್ಪಂದಕ್ಕೆ ಬನ್ನಿ ಅಥವಾ ಶರಣಾಗಿ. ಇಲ್ಲವಾದಲ್ಲಿ ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ನೀಡಿರುವ ಎಚ್ಚರಿಕೆಗೆ ಇರಾನ್‌ ಹೀಗೆ ತಿರುಗೇಟು ನೀಡುವ ಮೂಲಕ ತಾನು ಯುದ್ಧದಿಂದ ಹಿಂದೆ ಸರಿಯಲು ಸಿದ್ಧವಿಲ್ಲ ಎಂಬ ಸಂದೇಶ ನೀಡಿದೆ.

ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೆ 48 ಗಂಟೆಗಳ ಹೊಸ ಡೆಡ್‌ಲೈನ್‌ ನೀಡಿದ್ದು, ಹುಚ್ಚರೇ, ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ. ಜಾಗರೂಕರಾಗಿರಿ. ಅಲ್ಲಾಹನಲ್ಲಿ ಪ್ರಾರ್ಥಿಸಿ. ಜಲಸಂಧಿಯನ್ನು ತೆರೆಯದಿದ್ದರೆ, ಅಮೆರಿಕವು ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ಮಾಡಬಹುದು ಮತ್ತು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬೆಳವಣಿಗೆ ಮಧ್ಯೆ ದಕ್ಷಿಣ ಇಸ್ರೇಲ್‌ನ ಡಿಮೋನಾ ಪ್ರದೇಶದ ಬಳಿಯ ಪ್ರಮುಖ ಪರಮಾಣು ಕೇಂದ್ರದ ಪೆಟ್ರೋಕೆಮಿಕಲ್ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ ಕುವೈತ್‌ನ ಬುಬಿಯಾನ್ ದ್ವೀಪದಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳನ್ನು ಡ್ರೋನ್‌ ದಾಳಿ ನಡೆಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪೆಟ್ರೋಕೆಮಿಕಲ್ ಸ್ಥಾವರದ ಮೇಲೆ ದಾಳಿ ನಡೆದ ನಂತರ ಬೆಂಕಿ ಕಾಣಿಸಿಕೊಂಡಿದೆ. ಅಬುಧಾಬಿಯಲ್ಲಿ ಹಾನಿ ಪ್ರಮಾಣ ನಿರ್ಣಯಿಸುವವರೆಗೆ ಸ್ಥಾವರದಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ನೈಋತ್ಯ ಇರಾನ್‌ನ ವಿಮಾನ ನಿಲ್ದಾಣದ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳು ನಡೆದಿವೆ. ಇಸ್ರೇಲ್ ಗಡಿಯಿಂದ ದೂರದಲ್ಲಿರುವ ದಕ್ಷಿಣ ಲೆಬನಾನ್‌ನ ಕ್ಫರ್ ಹಟ್ಟಾ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಆರು ಜನರ ಕುಟುಂಬ ಸೇರಿದಂತೆ ಏಳು ಜನ‌ ಪ್ರಾಣ ಕಳೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *