Thursday, January 29, 2026
Menu

ಅಣು ನಿಶಸ್ತ್ರೀಕರಣ ಒಪ್ಪಂದಕ್ಕೆ ಬರದಿದ್ದರೆ ವಿನಾಶಕಾರಿ ದಾಳಿ: ಇರಾನ್‌ಗೆ ಟ್ರಂಪ್‌ ಬೆದರಿಕೆ

ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ತ್ಯಜಿಸಿ ಅಣು ನಿಶಸ್ತ್ರೀಕರಣ ಒಪ್ಪಂದಕ್ಕೆ ಬರಲು ಸಮಯ ಮೀರುತ್ತಿದೆ, ಒಪ್ಪಂದಕ್ಕೆ ಬರದಿದ್ದರೆ ಮುಂದಿನ ದಾಳಿ ತುಂಬಾ ಕೆಟ್ಟದಾಗಿ ಮತ್ತು ವಿನಾಶಕಾರಿಯಾಗಿರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಬೆದರಿಕೆಯೊಡ್ಡಿದ್ದಾರೆ.

ಟ್ರೂತ್ ಸೋಷಿಯಲ್’ ಪ್ಲಾಟ್‌ಫಾರ್ಮ್‌ನಲ್ಲಿ ಟ್ರಂಪ್‌ ಪೋಸ್ಟ್‌ ಮಾಡಿದ್ದು, ಇರಾನ್ ಕಡೆಗೆ ಬೃಹತ್ ನೌಕಾಪಡೆ ಸಾಗುತ್ತಿದೆ. ಇದು ಅಬ್ರಹಾಂ ಲಿಂಕನ್ ಏರ್‌ಕ್ರಾಫ್ಟ್ ಕ್ಯಾರಿಯರ್ ನೇತೃತ್ವದಲ್ಲಿದೆ. ವೆನಿಜುವೆಲಾ ಕಡೆಗೆ ಕಳುಹಿಸಿರುವ ನೌಕೆಗಿಂತಲೂ ದೊಡ್ಡದು. ಅಗತ್ಯ ಬಿದ್ದರೆ ತ್ವರಿತವಾಗಿ ಹಿಂಸೆಯೊಂದಿಗೆ ತನ್ನ ಗುರಿ ಸಾಧಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಇರಾನ್ ಸರ್ಕಾರ ಅಮೆರಿಕದ ಬೆದರಿಕೆಗಳನ್ನು ತಿರಸ್ಕರಿಸಿ, ಯಾವುದೇ ದಾಳಿಗೆ ತಕ್ಷಣ ಮತ್ತು ಶಕ್ತಿಯುತ ಪ್ರತಿಕ್ರಿಯೆ ನೀಡಲು ಸಿದ್ಧ ಎಂದು ಹೇಳಿದೆ. ಅಮೆರಿಕ -ಇರಾನ್‌ ಸಂಘರ್ಷದಿಂದ ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಉಂಟಾಗಿದೆ.

ಈ ಹಿಂದೆಯೇ ಟ್ರಂಪ್‌ ಇರಾನ್‌ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್‌ ದಾಳಿ ಮಾಡುವುದಾಗಿ ಬೆದರಿಸಿದ ಬೆನ್ನಲ್ಲೇ ಪ್ರತ್ಯುತ್ತರ ನೀಡಲು ಇರಾನ್‌ ಮುಂದಾಗಿದ್ದು, ದೇಶದಲ್ಲಿ ಸಶಸ್ತ್ರ ಪಡೆಗಳು ಉಡಾವಣೆಗಾಗಿ ದೈತ್ಯ ಕ್ಷಿಪಣಿಗಳನ್ನು ಸಿದ್ಧಪಡಿಸಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಅಮೆರಿಕ ವಿರುದ್ಧ ದೊಡ್ಡ ಮಟ್ಟದ ವಾಯುದಾಳಿ ನಡೆಸಲು ಇರಾನ್‌ ಯೋಜಿಸಿ ದೈತ್ಯ ಕ್ಷಿಪಣಿ ಗಳನ್ನು ದೇಶಾದ್ಯಂತ ಇರುವ ಭೂಗತ ನೆಲೆಗಳಲ್ಲಿ ಅಡಗಿಸಿಟ್ಟಿದೆ ಎಂದು ತಿಳಿದುಬಂದಿದೆ.

ಅಮೆರಿಕ ಬಾಂಬ್‌ ದಾಳಿಗೆ ಮುಂದಾದರೆ ಇರಾನ್‌ ಪ್ರತಿದಾಳಿ ನಡೆಸಲು ಸಿದ್ಧವಾಗಿದೆ ಎನ್ನುವ ಸಂದೇಶ ಈ ಮೂಲಕ ರವಾನೆಯಾಗಿದೆ. ಇರಾನ್‌ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್‌ ದಾಳಿ ನಡೆಸುವ ಮತ್ತು ಎರಡು ಪಟ್ಟು ಸುಂಕ ವಿಧಿಸುವ ಎಚ್ಚರಿಕೆ ನೀಡಿದ ಟ್ರಂಪ್‌, ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಯುತ್ತದೆ. 4 ವರ್ಷಗಳ ಹಿಂದೆ ಮಾಡಿದಂತೆ ಅವರ ಮೇಲೆ ಎರಡು ಪಟ್ಟು ಸುಂಕಗಳನ್ನು ವಿಧಿಸುವ ಅವಕಾಶವಿದೆ ಎಂದು ಹೇಳಿದ್ದಾರೆ.

2017-21ರ ಮೊದಲ ಅವಧಿಯಲ್ಲಿ ಟ್ರಂಪ್ ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015ರ ಒಪ್ಪಂದದಿಂದಹೊರ ಬಂದಿದ್ದರು. ಟೆಹ್ರಾನ್‌ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿ ಅಮೆರಿಕದ ನಿರ್ಬಂಧಗಳನ್ನು ಮತ್ತೆ ಹೇರಿದ್ದರು. ಅಂದಿನಿಂದ ಇಸ್ಲಾಮಿಕ್ ಗಣರಾಜ್ಯವು ಯುರೇನಿಯಂ ಬಲಪಡಿಸುವ ಕಾರ್ಯಕ್ರಮ ವನ್ನು ಹೆಚ್ಚಿಸುವಲ್ಲಿ ಒಪ್ಪಿದ ಮಿತಿಗಳನ್ನು ಮೀರಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದು ರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ಇರಾನ್‌ ಇಲ್ಲಿಯವರೆಗೆ ನಿರ್ಲಕ್ಷಿಸಿದೆ. ಹೊಸ ಪರಮಾಣು ಒಪ್ಪಂದ ಮಾಡಿಕೊಳ್ಳು ವಂತೆ ಒತ್ತಾಯಿಸಿ ಟ್ರಂಪ್ ಬರೆದ ಪತ್ರಕ್ಕೆ ಇರಾನ್ ಪ್ರತಿಕ್ರಿಯೆ ಕಳುಹಿಸಿತ್ತು.

Related Posts

Leave a Reply

Your email address will not be published. Required fields are marked *