Thursday, September 04, 2025
Menu

ರಷ್ಯಾದಿಂದ ತೈಲ ಆಮದು ಮುಂದುವರಿಸಿದ್ರೆ ಮತ್ತಷ್ಟು ಸುಂಕ: ಭಾರತಕ್ಕೆ ಟ್ರಂಪ್‌ ಬೆದರಿಕೆ

ಭಾರತವು ರಷ್ಯಾದಿಂದ ತೈಲ ಆಮದು ಮುಂದುವರಿಸಿದರೆ ಮತ್ತಷ್ಟು ಸುಂಕ ಪಾವತಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಚೀನಾದ ನಂತರ ಭಾರತವೇ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಎಂದು ಈ ಹಿಂದೆ ಟ್ರಂಪ್‌ ಅಸಹನೆ ಹೊರ ಹಾಕಿದ್ದರು.

ರಷ್ಯಾದೊಂದಿಗೆ ವ್ಯಾಪಾರ ಸಂಬಂಧ ಮುಂದುವರಿಸುವ ದೇಶಗಳ ವಿರುದ್ಧ ಅಮೆರಿಕ ಮೊದಲ ಹಂತದ ಸುಂಕವಷ್ಟೇ ವಿಧಿಸಿದೆ, ಹಂತ-2 ಮತ್ತು ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಶೇ. 25 ಸುಂಕ, ಆಗಸ್ಟ್ 27 ರಂದು ಹೆಚ್ಚುವರಿಯಾಗಿ ಶೇ. 25 ದ್ವಿತೀಯ ನಿರ್ಬಂಧ ಜಾರಿಗೊಳಿಸುವ ಮೂಲಕ ಅಮೆರಿಕವು ಭಾರತೀಯ ಸರಕುಗಳ ಮೇಲಿನ ಒಟ್ಟು ಸುಂಕ ಮೊತ್ತವನ್ನು ಶೇ. 50ಕ್ಕೆ ಏರಿಸಿದೆ.

ಈ ನಡುವೆ ಅಮೆರಿಕದ ತಜ್ಞರೊಬ್ಬರು ಟ್ರಂಪ್ ಅವರ ಸುಂಕ ನೀರಿಯನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಭಾರತದ ಮೇಲಿನ ಹೆಚ್ಚಿನ ಸುಂಕಗಳನ್ನು ಹಿಂದಕ್ಕೆ ಪಡೆಯಬೇಕು, ಆ ಸುಂಕವನ್ನು ಶೂನ್ಯಕ್ಕೆ ಇಳಿಸಬೇಕು ಮತ್ತು ಭಾರತದ ಕ್ಷಮೆ ಯಾಚಿಸಬೇಕು ಎಂದು ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ.

ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಡ್ವರ್ಡ್ ಪ್ರೈಸ್ , ಭಾರತವು 21ನೇ ಶತಮಾನವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ಹೊಂದಿದೆ. ಟ್ರಂಪ್ ಅವರ ಸುಂಕ ನೀತಿಯು ವಾಷಿಂಗ್ಟನ್‌ನ ಅತ್ಯಂತ ಪ್ರಮುಖ ಪಾಲುದಾರಿಕೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.

Related Posts

Leave a Reply

Your email address will not be published. Required fields are marked *