ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯುತ್ತಾರೆ, ಸೇನಾ ಕಾರ್ಯಾಚರಣೆ ಸಮಯದಲ್ಲಿ ಇರಾನ್‌ನ ನಾಯಕತ್ವದ ವ್ಯಕ್ತಿಗಳನ್ನು ಗುರಿಯಾಗಿಸುತ್ತಿದ್ದೇವೆ. ಅಮೆರಿಕ ಈಗ ಅತ್ಯಂತ ಪ್ರಬಲ ಸ್ಥಾನದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ಮಾತನಾಡಿದ ಅವರು, ಇರಾನ್ ಜೊತೆಗಿನ ಸೇನಾ ಕಾರ್ಯಕ್ಷಮತೆಗೆ ಅಮೆರಿಕ ಪಡೆಗೆ ಅಸಾಧಾರಣ ಅಂಕ ಕೊಟ್ಟಿದ್ದಾಗಿ ಹೇಳಿದ್ದಾರೆ. ಕಡಿಮೆ ಅವಧಿಯಲ್ಲಿ ಕಾರ್ಯಾಚರಣೆ ತ್ವರಿತ ಪ್ರಗತಿ ಸಾಧಿಸಿದೆ. ಅಮೆರಿಕ ಮತ್ತು ಮಿತ್ರಪಕ್ಷಗಳು ಮೇಲುಗೈ ಸಾಧಿಸುತ್ತಿವೆ. 10 ರಲ್ಲಿ ಎಷ್ಟು ಅಂಕ ಕೊಡ್ತೀರಿ ಅಂತ ಕೇಳಿದ್ರೆ ೧೫ ಅಂಕ ಕೊಡುವುದಾಗಿ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆರಿಕವು ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವತ್ತ ಸಾಗುತ್ತಿದೆ. ಈ ದಾಳಿ ಮುಂದುವರಿಸುತ್ತೇವೆ, ಮಿತ್ರರಾಷ್ಟ್ರಗಳ ಮೇಲಿನ ಬೆದರಿಕೆಗಳನ್ನ ತಡೆಯಲು ಇದು ಅನಿವಾರ್ಯ ಆಗಿದೆ ಎಂದಿದ್ದಾರೆ. ಅಮೆರಿಕ ಪಡೆಯ ದಾಳಿಗಳು ಈಗಾಗಲೇ ಇರಾನ್‌ನ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಿವೆ, ಯುದ್ಧ ವ್ಯವಸ್ಥೆಗಳನ್ನು ನಾಶಪಡಿಸಿವೆ. ಯುದ್ಧ ಮುಗಿದ ಬಳಿಕ ವಿವರವಾದ ಯೋಜನೆ ರೂಪಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಇಸ್ರೇಲ್– ಅಮೆರಿಕ ದಾಳಿಯಿಂದ ಆರಂಭಗೊಂಡ ಯುದ್ಧ ಗುರುವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು, ವಿಶ್ವದ ನಾನಾ ರಾಷ್ಟ್ರಗಳಲ್ಲಿ ವ್ಯಾಪಿಸಿದೆ. ಶ್ರೀಲಂಕಾ ಕರಾವಳಿಯಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನಿನ ಯುದ್ಧ ನೌಕೆಯನ್ನು ಮುಳುಗಿಸಿದ್ದು, ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತಿದೆ, ಇರಾನ್ ಕೂಡ ಪ್ರತಿದಾಳಿ ಆರಂಭಿಸಿದೆ.


