ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶೀ ವಾಹನಗಳ ಆಮದು ಮೇಲೆ ಶೇ.25ರಷ್ಟು ಸುಂಕ ಹೇರುವುದಾಗಿ ಘೋಷಿಸಿದ್ದಾರೆ.
ವಿದೇಶಗಳಲ್ಲಿ ಉತ್ಪಾದನೆ ಆಗುವ ಎಲ್ಲಾ ಮಾದರಿಯ ವಾಹನಗಳ ಆಮದು ಮೇಲೆ ಶೇ.25ರಷ್ಟು ಸುಂಕ ವಿಧಿಸಲಾಗಿದೆ. ಒಂದು ವೇಳೆ ಅಮೆರಿಕದಲ್ಲಿ ಉತ್ಪಾದಿಸಿದರೆ ಸುಂಕ ವಿಧಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ 2ರಿಂದ ಸುಂಕ ಹೇರಿಕೆ ಜಾರಿಗೆ ಬರಲಿದ್ದು, ಇದರಿಂದ ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದ್ದ ವಿದೇಶೀ ಕಾರುಗಳು ಹಾಗೂ ಸರಕು ಸಾಗಾಟಕ್ಕೆ ಬಳಸುವ ಹಗುರ ಟ್ರಕ್ ಗಳ ದರ ಏರಿಕೆಯಾಗಲಿವೆ.
ಅಮೆರಿಕಕ್ಕೆ ಜಪಾನ್, ದಕ್ಷಿಣ ಕೊರಿಯಾ, ಕೆನಡಾ, ಮೆಕ್ಸಿಕೊ ಮತ್ತು ಜರ್ಮನಿಯಿಂದ ಕಾರುಗಳು ಆಮದು ಆಗುತ್ತಿದ್ದು, ಶೇ.50ರಷ್ಟು ಕಾರುಗಳು ಕೆನಡಾ ಮತ್ತು ಮೆಕ್ಸಿಕೊದಿಂದ ಬರುತ್ತಿವೆ. ಇದರಿಂದ ನೆರೆಯ ರಾಷ್ಟ್ರಗಳ ಮೇಲೆ ಇದು ಪರೋಕ್ಷವಾಗಿ ದೊಡ್ಡ ಹೊಡೆತ ನೀಡಲಿವೆ.