35 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿ ಅಜಯ್ ಹಿಲೋರಿ ನೇಮಕಗೊಂಡಿದ್ದಾರೆ.
ಕಾರ್ತಿಕ್ ರೆಡ್ಡಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ, ಕೇಂದ್ರ ವಿಭಾಗದ ಡಿಸಿಪಿಯಾಗಿ ಅಕ್ಷಯ್ ಅಕಾಯ್, ಕೆ. ಪರುಷರಾಮ್ ವೈಟ್ ಫಿಲ್ಡ್ ಡಿಸಿಪಿ, ಉತ್ತರ ವಿಭಾಗದ ಡಿಸಿಪಿಯಾಗಿ ಬಾಬಾಸಾಬ್ ನೇಮಗೌಡ, ಶ್ರೀಹರಿ ಬಾಬು ಸಿಸಿಬಿ ಕ್ರೈಂ 1 ಡಿಸಿಪಿಯಾಗಿ ನೇಮಕಗೊಂಡಿದ್ದಾರೆ.
ಮೂರು ಹೊಸ ಡಿವಿಜನ್ ಗಳಿಗೆ ಡಿಸಿಪಿಗಳ ನೇಮಕಗೊಳಿಸಲಾಗಿದೆ. ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್, ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ ಎಲ್, ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ ಎಮ್ ನೇಮಕಗೊಂಡಿದ್ದಾರೆ. ಒಟ್ಟು 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.