ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ನಲ್ಲಿ ರಿಸರ್ವೇಷನ್ ಟಿಕೆಟ್ಗಳನ್ನು ಕನ್ಫರ್ಮ್ ಮಾಡಿ ಕೊಡುವ ಟ್ರಾವೆಲ್ ಏಜೆನ್ಸಿಗಳ ದಂಧೆಯನ್ನು ಮಟ್ಟ ಹಾಕಲು ಆರ್ಪಿಎಫ್ನ ಕ್ರೈಮ್ ಇನ್ವೆಸ್ಟಿಗೇಷನ್ ಬ್ರ್ಯಾಂಚ್ ಹಾಗೂ ಡಿವಿಷನಲ್ ಸ್ಟೆಷಲ್ ಟೀಂ ಕಾರ್ಯಾಚರಣೆಗೆ ಇಳಿದಿದ್ದು, ದಾಳಿ ನಡೆಸಿದೆ.
ವೇಟಿಂಗ್ ಲಿಸ್ಟ್ನಲ್ಲಿರುವ ಟಿಕೆಟ್ನ್ನು ರಿಸರ್ವೇಷನ್ ಮಾಡಿಕೊಡುವುದಾಗಿ ಹೇಳಿ ಪ್ರಯಾಣಿಕರ ಬಳಿ ವನ್ ಟು ಡಬಲ್ ಹಣ ಪಡೆಯುವ ತಂಡ ಟಿಕೆಟ್ ಕೌಂಟರ್ಗಳ ಬಳಿ ನಿಂತು ವೇಟಿಂಗ್ ಲಿಸ್ಟ್ ಇರುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ದಂಧೆ ನಡೆಸುತ್ತಿದೆ. ಕಾಯುತ್ತಿರುವ ಪ್ರಯಾಣಿಕರನ್ನು ತಮ್ಮ ಟ್ರಾವೆಲ್ ಏಜೆನ್ಸಿ ಅಂಗಡಿಗಳಿಗೆ ಕರೆದುಕೊಂಡು ಹೋಗಿ ಟಿಕೆಟ್ ಕನ್ಫರ್ಮ್ ಮಾಡಿಸಿಕೊಡುತ್ತಾರೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರ್ಪಿಎಫ್ನ ಕ್ರೈಮ್ ಇನ್ವೆಸ್ಟಿಗೇಷನ್ ಬ್ರ್ಯಾಂಚ್ ಹಾಗೂ ಡಿವಿಷನಲ್ ಸ್ಟೆಷಲ್ ಟೀಂ ದಾಳಿ ನಡೆಸಿದ್ದಾರೆ.
ಟಿಕೆಟ್ ಕನ್ಫರ್ಮ್ ಮಾಡಿಸಿಕೊಡುತ್ತಿದ್ದ ಟ್ರಾವೆಲ್ ಏಜೆನ್ಸಿಯ 9 ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಟ್ರಾವೆಲ್ ಏಜೆನ್ಸಿ ಸಿಬ್ಬಂದಿಯೇ ಟಿಕೆಟ್ ಬುಕ್ ಮಾಡಿ, ಕನ್ಫರ್ಮ್ ಮಾಡಿಕೊಡುತ್ತಿದ್ದರು. ಕೆಲವರ ಬಳಿ ವೇಟಿಂಗ್ ಟಿಕೆಟ್ ಪಿಎನ್ಆರ್ ನಂಬರ್ ಪಡೆದು ರಿಸರ್ವ್ ಮಾಡಿಕೊಡುವುದಾಗಿ ರಿಸರ್ವೇಷನ್ ಕೌಂಟರ್ ಬಳಿಯೇ ವ್ಯವಹಾರ ನಡೆಸುತ್ತಿದ್ದರು.
ಈ ಹಿಂದೆಯೂ ನಕಲಿ ಟಿಕೆಟ್ ಹಾಗೂ ರಿಸರ್ವೇಷನ್ ಟಿಕೆಟ್ ನೆಪದಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಗುಂಪನ್ನು ಬಂಧಿಸಲಾಗಿತ್ತು. ಇನ್ನೊಮ್ಮೆ ಈ ರೀತಿಯ ಅಕ್ರಮವೆಸಗಿದರೆ ಐಆರ್ಸಿಟಿಸಿ ಐಡಿ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ರೈಲ್ವೆ ಸೀಟು ಚಾರ್ಟ್ ತಯಾರಿಸುವ ಸಿಬ್ಬಂದಿ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.