ಬೆಂಗಳೂರು ನಗರದ ಅರಮನೆ ಮೈದಾನದ ಸಮೀಪ ನಾಳೆ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಐಸಿಡಿಎಸ್ ಯೋಜನೆಯ ಸುವರ್ಣ ಮಹೋತ್ಸವ ನಡೆಲಿದ್ದು, ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಇರುತ್ತದೆ ಎಂದು ಬೆಂಗಳೂರಿನ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಐಸಿಡಿಎಸ್ ಯೋಜನೆಯ ಸುವರ್ಣ ಮಹೋತ್ಸವ ಅರಮನೆ ಮೈದಾನದ ಕೃಷ್ಣವಿಹಾರ ಗೇಟ್ ಸಂಖ್ಯೆ-01 ರಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯುವುದು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಕೇಂದ್ರ ಮತ್ತು ರಾಜ್ಯದ ಕ್ಯಾಬಿನೆಟ್ ದರ್ಜೆ ಸಚಿವರು, ಗಣ್ಯ ವ್ಯಕ್ತಿಗಳು ಸೇರಿದಂತೆ 40,000 ಸಾರ್ವಜನಿಕರು ಮತ್ತು 959 ವಾಹನಗಳು ಆಗಮಿಲಿವೆ. ಜನದಟ್ಟಣೆಯಿಂದ ಆ ಪ್ರದೇಶದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ವಿಶೇಷ ಟ್ರಾಫಿಕ್ ನಿರ್ವಹಣಾ ಕ್ರಮ ಪ್ರಕಟಿಸಿದ್ದಾರೆ. ಅರಮನೆ ಮೈದಾನ, ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ ಹಾಗೂ ಸಿ.ವಿ ರಾಮನ್ ರಸ್ತೆಯಲ್ಲಿ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಹಲವು ಮಾರ್ಗ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.
ನಾಳೆ ಬೆಳಿಗ್ಗೆ 7 ರಿಂದ ಸಂಜೆ 4ರವರೆಗೆ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾದ ರಸ್ತೆಗಳು
ಪ್ಯಾಲೇಸ್ ರಸ್ತೆ, ನಂದಿದುರ್ಗ ರಸ್ತೆ, ಬಳ್ಳಾರಿ ರಸ್ತೆ, ಸಿ.ವಿ ರಾಮನ್ ರಸ್ತೆ, ಜಯಮಹಲ್ ರಸ್ತೆ, ಗುಟ್ಟಹಳ್ಳಿ ರಸ್ತೆ.
ಏರ್‌ಪೋರ್ಟ್ ಕಡೆಗೆ ತೆರಳುವ ವಾಹನಗಳು: ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್, ಟ್ಯಾನರಿ ರಸ್ತೆ, ನಾಗಾವರ ನಂತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಕ್ಕಿಗೆ ಮುಂದುವರಿಯಬಹುದು.
ಏರ್‌ಪೋರ್ಟ್‌ನಿಂದ ನಗರಕ್ಕೆ ಬರುವ ವಾಹನಗಳು
ಏರ್‌ಪೋರ್ಟ್ ದಿಕ್ಕಿನಿಂದ ಸಂಚರಿಸುವವರು ಹೆಬ್ಬಾಳ ಜಂಕ್ಷನ್‌ನಲ್ಲಿ ಮಾರ್ಗ 1: ಹೆಬ್ಬಾಳ → ಎಡ ತಿರುವು → ನಾಗಾವರ ಜಂಕ್ಷನ್ → ಬಂಬು ಬಜಾರ್ → ಕ್ಲೀನ್ಸ್ ರೋಡ್ → ಸಿಟಿ. ಮಾರ್ಗ 2: ಹೆಬ್ಬಾಳ ರಿಂಗ್‌ರೋಡ್ → ಕುವೆಂಪು ಸರ್ಕಲ್ → ಗೊರಗುಂಟೆ ಪಾಳ್ಯ ಜಂಕ್ಷನ್ → ಎಡ ತಿರುವು → ಡಾ.ರಾಜ್ ಕುಮಾರ್ ರಸ್ತೆ → ಸಿಟಿ ಬಳಸಬಹುದು.
ಯಶವಂತಪುರದಿಂದ ಏರ್‌ಪೋರ್ಟ್ ಕಡೆಗೆ ತೆರಳುವ ವಾಹನಗಳು
ಮತ್ತಿಕೆರೆ ರಸ್ತೆ, ಬಿ.ಇ.ಎಲ್ ವೃತ್ತ, ಬಲ ತಿರುವು → ರಿಂಗ್ ರೋಡ್ ನಂತರ ಏರ್‌ಪೋರ್ಟ್‌ಗೆ ಸಂಚರಿಸಬಹುದು.
ಯಶವಂತಪುರದಿಂದ ನಗರ ಕೇಂದ್ರಕ್ಕೆ ತೆರಳುವ ವಾಹನಗಳು
ಯಶವಂತಪುರ → ಡಾ. ರಾಜ್ ಕುಮಾರ್ ರಸ್ತೆ → ನಗರ ಕೇಂದ್ರ ಮೂಲಕ ಸಾಗಬಹುದು.
ಭಾರೀ ವಾಹನಗಳಿಗೆ ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಬಂಧವಿದ್ದು, ಹೆಬ್ಬಾಳದಿಂದ ಬಳ್ಳಾರಿ ರಸ್ತೆ ಕಡೆ ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಔಟರ್ ರಿಂಗ್ ರೋಡ್ ನಲ್ಲೇ ಚಲಿಸಬೇಕು. ಓಲ್ಡ್ ಹೈ ಗ್ರೌಂಡ್ಸ್–ಕಲ್ಪನಾ ಜಂಕ್ಷನ್ ಪ್ರದೇಶದಲ್ಲಿ ಸಂಚರಿಸಬಾರದು. ಕಲ್ಪನಾ ಜಂಕ್ಷನ್ → ಓಲ್ಡ್ ಉದಯ ಟಿವಿ ಜಂಕ್ಷನ್ → ಕಂಟೋನ್ಮೆಂಟ್ ರೈಲ್ವೇ ಸ್ಟೇಷನ್ → ಟ್ಯಾನರಿ ರಸ್ತೆ → ನಾಗಾವರ ಮಾರ್ಗ ಬಳಸಬೇಕು.ಯಶವಂತಪುರದಿಂದ ಸಿ.ವಿ ರಾಮನ್ ರಸ್ತೆ ಕಡೆ ಭಾರೀ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧವಿದೆ.


