Wednesday, January 14, 2026
Menu

ಅರಸೀಕೆರೆ ಅಂಗಡಿಯಲ್ಲೇ ಕುಸಿದು ವ್ಯಾಪಾರಿ ಸಾವು

ಹಾಸನದ ಅರಸೀಕೆರೆ ಪಟ್ಟಣದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ.

ಪ್ರವೀಣ್ (45) ಮೃತ ವ್ಯಕ್ತಿ. ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದ ಪ್ರವೀಣ್ ಅರಸೀಕೆರೆ ಪಟ್ಟಣದಲ್ಲಿ ಅಟೊಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಅಂಗಡಿಯಲ್ಲಿ ವರ್ತಕರಿಗೆ ವಸ್ತುಗಳನ್ನು ನೀಡುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ.

ಅಂಗಡಿಯಲ್ಲಿದ್ದ ಅವರ ಪುತ್ರ ಕೂಡಲೇ   ಪ್ರವೀಣ್ ಎದೆಯನ್ನು ಒತ್ತಿದ್ದಾನೆ. ಆದರೆ ಪ್ರವೀಣ್ ಅಂಗಡಿಯಲ್ಲೇ ಅಸು ನೀಗಿದ್ದಾರೆ. ಕೊರೋನ ಸಮಯದಲ್ಲಿ ಪ್ರವೀಣ್ ಪತ್ನಿ ಮೃತಪಟ್ಟಿದ್ದರು. ಪೋಷಕರಿಬ್ಬರನ್ನು ಕಳೆದುಕೊಂಡು ಮಗ ಅನಾಥನಾಗಿದ್ದಾನೆ.

Related Posts

Leave a Reply

Your email address will not be published. Required fields are marked *