Menu

ಟ್ರ್ಯಾಕ್ಟರ್ -ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಗರ್ಬಿಣಿ ಸೇರಿ ಇಬ್ಬರ ಸಾವು

ಸಾರಿಗೆ ಬಸ್ ಮತ್ತು ರೈತರ ಟ್ರ್ಯಾಕ್ಟರ್ ನಡುವೆ ಸಂಭವಿಸಿದ  ಡಿಕ್ಕಿಯಲ್ಲಿ ಗರ್ಭಿಣಿ ಸೇರಿ ಇಬ್ಬರು ಸಾವಿಗಿಡಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಸಂಭವಿಸಿದೆ.

ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಗೋಳ ಸಮೀಪ ಗುರುವಾರ ಮುಂಜಾನೆ ಜರುಗಿದ್ದು, ಶ್ರೀದೇವಿ ರಾಮಣ್ಣ (18) ಸ್ಥಳದಲ್ಲಿಯೇ ಸಾವಿಗಿಡಾದರೆ, ಅಂಬ್ರಮ್ಮ (20) ಬಾಗಲಕೋಟೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಬನ್ನಿಗೋಳ ಗ್ರಾಮದ ಜಮಿನುದಲ್ಲಿನ ಕಡಲೆ ಬೆಳೆ ಕಿತ್ತಲು ಕೂಲಿ ಕಾರ್ಮಿಕ ಮಹಿಳೆಯರನ್ನು ಟ್ರ್ಯಾಕ್ಟರ್ ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಎದುರಿಗೆ ಅಂಕಲಿಮಠದಿಂದ ಮುದಗಲ್ ಕಡೆ ಬರುತಿದ್ದ ಲಿಂಗಸುಗೂರು ಸಾರಿಗೆ ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಬಸಕ್ಕೆ ಟ್ರ್ಯಾಕ್ಟರ್ ರಸ್ತೆ ಪಕ್ಕದ ತೆಗ್ಗಿಗೆ ಮುಗುಚಿ ಬಿದ್ದಿದ್ದರಿಂದ ಟ್ರ್ಯಾಕ್ಟರ್ ಅಡಿ ಸಿಲುಕಿದ್ದ ಶ್ರೀದೇವಿ ಸ್ಥಳದಲ್ಲಿಯೇ ಅಸು ನೀಗಿದ್ದಾಳೆ.

ಇದರ ಜೊತೆಗೆ ಮಾನಪ್ಪ, ಗೌರಮ್ಮ, ಹನುಮಮ್ಮ, ಬಂಡಾರೆಪ್ಪ, ಶರಣಪ್ಪ, ಅಂಬ್ರಮ್ಮ, ರೇಣುಕ, ಗಿರಿಜಮ್ಮ, ಪಾರ್ವತೆಮ್ಮ ,ಹನುಮವ್ವ ಗೋನಾಳ,ಶಿವಪ್ಪ, ಶಾಂತಮ್ಮ, ಶರಣಮ್ಮ ವಸ್ತ್ರದ, ಪಾರ್ವತೆಮ್ಮ ಹಳ್ಳಿ ಹಾಗೂ ಸಾರಿಗೆ ಬಸ್ ಚಾಲಕ ಸೇರಿದಂತೆ ಹತ್ತಕ್ಕೂ ಅಧಿಕ ಜನರಿಗೆ ಗಂಬೀರ ಗಾಯಗಳಾಗಿವೆ ಗಾಯಾಳುಗಳನ್ನು ಬಾಗಲಕೋಟೆ, ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಮಸ್ಕಿ ಸಿಪಿಐ.ಪ್ರಕಾಶ ಲಕ್ಕಂ,ಪಿಎಸೈ.ವೆಂಕಟೇಶ ಮಾಡಗೇರಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *