ಗುವಾಹಟಿ: ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮಾರ್ಚ್ 26, 2025ರಂದು ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್‌ನ ೬ನೇ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ರಾಜಸ್ಥಾನ್ ರಾಯಲ್ಸ್ ತಮ್ಮ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮಾರ್ಚ್ 23 ರಂದು ಹೈದರಾಬಾದಲ್ಲಿ ೪೪ ರನ್‌ಗಳಿಂದ ಸೋತಿದೆ. ಇದರಿಂದ ತಂಡವು ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಮರಳುವ ಗುರಿ ಹೊಂದಿದೆ.
ಇನ್ನೊಂದೆಡೆ, ಕೆಕೆಆರ್ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್‌ಗಳಿಂದ ಸೋತಿದ್ದು, ಎರಡನೇ ಪಂದ್ಯದಲ್ಲಿ ತನ್ನ ಗೆಲುವಿನ ಖಾತೆ ತೆರೆಯಲು ಉತ್ಸುಕವಾಗಿದೆ.
ಪಿಚ್ ಮತ್ತು ಹವಾಮಾನ
ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ಗೆ ಸಹಕಾರಿಯಾಗಿದೆ, ಆದರೆ ಈ ಸೀಸನ್ನಲ್ಲಿ ಮಳೆಯ ಸಾಧ್ಯತೆಯಿಂದಾಗಿ ಪಿಚ್‌ನ ತೇವಾಂಶ ವೇಗದ ಬೌಲರ್‌ಗಳಿಗೆ ಸ್ವಲ್ಪ ಸಹಾಯ ಮಾಡಬಹುದು.
ಹವಾಮಾನ ವರದಿಗಳ ಪ್ರಕಾರ, ಮಾರ್ಚ್ 26ರಂದು ಗುವಾಹಟಿಯಲ್ಲಿ ಮಳೆಯ ಸಾಧ್ಯತೆ ಇದೆ, ಇದು ಪಂದ್ಯದ ಮೇಲೆ ಪರಿಣಾಮ ಬೀರಬಹುದು.
2024 ರಲ್ಲಿ ಇದೇ ಮೈದಾನದಲ್ಲಿ rr ಮತ್ತು kkr ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು, ಆದ್ದರಿಂದ ಈ ಬಾರಿಯೂ ಹವಾಮಾನವು ಪ್ರಮುಖ ಪಾತ್ರವನ್ನು ವಹಿಸಬಹುದು.
ರೋಚಕ ಪಂದ್ಯದ ನಿರೀಕ್ಷೆ
ಆರ್‌ಆರ್ ಮತ್ತು ಕೆಕೆಆರ್ ತಂಡಗಳು IPl ನಲ್ಲಿ ಒಟ್ಟು 30 ಬಾರಿ ಮುಖಾಮುಖಿಯಾಗಿವೆ, ಎರಡೂ ತಂಡಗಳು ತಲಾ ೧೪ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ, ಮತ್ತು ಎರಡು ಪಂದ್ಯಗಳು ರದ್ದಾಗಿವೆ.
ಈ ಪಂದ್ಯವು ಎರಡೂ ತಂಡಗಳಿಗೆ ಪ್ರಮುಖವಾಗಿದೆ, ಏಕೆಂದರೆ ಆರಂಭಿಕ ಸೋಲಿನ ನಂತರ ಗೆಲುವಿನ ಖಾತೆ ತೆರೆಯುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಆರ್‌ಆರ್ ತಂಡವು ತವರು ಪ್ರೇಕ್ಷಕರ ಬೆಂಬಲದೊಂದಿಗೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸುತ್ತದೆ, ಆದರೆ ಕೆಕೆಆರ್ ತಂಡವು ತಮ್ಮ ಸ್ಪಿನ್ ದಾಳಿಯ ಮೂಲಕ ಆರ್‌ಆರ್ ಬ್ಯಾಟರುಗಳಿಗೆ ಸವಾಲು ಒಡ್ಡಲು ಯೋಜಿಸುತ್ತದೆ. ಆದರೆ, ಮಳೆಯ ಸಾಧ್ಯತೆಯು ಎರಡೂ ತಂಡಗಳ ತಂತ್ರಗಾರಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಜೋಫ್ರಾ ಆರ್ಚರ್, ಶಿಮ್ರಾನ್ ಹೆಟ್ಮೆಯರ್, ತುಷಾರ್ ದೇಶಪಾಂಡೆ, ವನಿಂದು ಹಸರಂಗ/ಮಹೀಶ್ ತೀಕ್ಷಣ, ನಿತೀಶ್ ರಾಣಾ, ಸಂದೀಪ್ ಶರ್ಮಾ, ಫಜಲ್ಹಕ್ ಫಾರೂಕಿ, ಶುಭಂ ದುಬೆ.
ಕೋಲ್ಕತ್ತಾ ನೈಟ್ ರೈಡರ್ಸ್: ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ (ನಾಯಕ), ಅಂಗಕೃಷ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಾಮನ್ದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸ್ಪೆನ್ಸರ್ ಜಾನ್ಸನ್/ಅನ್ರಿಚ್ ನಾರ್ಟ್ಜೆ, ವೈಭವ್ ಅರೋರಾ.
ಪ್ರಮುಖ ಆಟಗಾರರು- ಆರ್‌ಆರ್: ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಜೋಫ್ರಾ ಆರ್ಚರ್. ಕೆಕೆಆರ್: ಸುನಿಲ್ ನಾರಾಯಣ್, ವರುಣ್ ಚಕ್ರವರ್ತಿ, ಆಂಡ್ರೆ ರಸಲ್.