Tuesday, February 04, 2025
Menu

ನಿರ್ದೇಶಕನಾಗಬೇಕಾದರೆ ಬರವಣಿಗೆ ಮೇಲೆ ಹಿಡಿತವಿರಬೇಕು: ಪಿ.ಶೇಷಾದ್ರಿ

ಬೆಂಗಳೂರು: ಚಲನಚಿತ್ರ ನಿರ್ದೇಶಕನಾಗಬೇಕು ಎಂದುಕೊಂಡವರು ಬರವಣಿಗೆಯನ್ನು ಸಿದ್ಧಿಸಿಕೊಂಡಿರಬೇಕು ಎಂದು ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಹಮ್ಮಿಕೊಂಡಿದ್ದ ‘ಮೀಡಿಯಾ ಕ್ರಾಫ್ಟ್’ ಕಾರ್ಯಕ್ರಮವನ್ನು ಉದ್ಘಾಟಿಸಿ‌ ಮಾತನಾಡಿದ ಅವರು, ಇಂದಿನ ಮಾಧ್ಯಮ‌ ಕ್ಷೇತ್ರ ಬಹಳಷ್ಟು ವಿಸ್ತಾರವಾಗಿದೆ. 20 ವರ್ಷಗಳ ಹಿಂದೆ ಒಂದೇ ಟಿವಿ ಚಾನೆಲ್, ಒಂದೆರಡು ಪತ್ರಿಕೆಗಳು ಇದ್ದವು. ಆದರೆ ಇಂದು ಹತ್ತಾರು ಸುದ್ದಿ ವಾಹಿನಿಗಳು, ಪತ್ರಿಕೆಗಳು ಇವೆ ಎಂದರು.

ಮೊದಲೆಲ್ಲ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಮಾಡಬೇಕಾದರೆ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದವರ ಸಂಬಂಧಿಕರಾಗಿರಬೇಕಿತ್ತು, ಇಲ್ಲವೇ ದುಡ್ಡಿರಬೇಕಿತ್ತು, ಆದರೆ ಇಂದಿನ ಸ್ಥಿತಿ ಬಹಳಷ್ಟು ಬದಲಾಗಿದೆ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್‌ಗಳಿವೆ, ಯೂಟ್ಯೂಬ್‌ನಂತಹ ಉಚಿತ ವೇದಿಕೆಗಳಿವೆ. ಆದರೆ ಆ ಎಲ್ಲ ಅವಕಾಶಗಳನ್ನು ಪಡೆಯಲು‌ ಅದರದ್ದೇ ಆದ ತಯಾರಿ ಅಗತ್ಯ, ಆ ತಯಾರಿಯನ್ನು ನೀವು ವಿದ್ಯಾರ್ಥಿ ಹಂತದಲ್ಲೇ ಆರಂಭಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಿರಿಯ ಪತ್ರಕರ್ತೆ ಶ್ರೀಮತಿ ಶಾಂತಲಾ ಧರ್ಮರಾಜ್ ಮಾತನಾಡಿ, ಪತ್ರಕರ್ತರಾಗಬೇಕಾದವರಿಗೆ‌ ಭಾಷೆಯ ಮೇಲೆ ಹಿಡಿತವಿರಬೇಕು, ನಿಮ್ಮ ಮಾತೃಭಾಷೆಯಲ್ಲಿ ಕನಿಷ್ಠ ಐದು ಸಾವಿರ ಪದಗಳ ಪರಿಚಯವಿರಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯಗಳು, ಪತ್ರಿಕೋದ್ಯಮ ಪರಿಣತರು ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಕಲಿಸಬಹುದೇ ವಿನಾ ಭಾಷೆ ಕಲಿಸಲು ಸಾಧ್ಯವಿಲ್ಲ.ಆದ್ದರಿಂದ ನಿಮ್ಮದೇ ಸ್ವಂತ ಪದಗಳನ್ನು ಬಳಸುವ ಮೂಲಕ ವರದಿ ಬರೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಟಿವಿ, ಪತ್ರಿಕೆ, ಸಿನಿಮಾ ಮಾತ್ರವಲ್ಲದೇ ಸೋಷಿಯಲ್ ಮೀಡಿಯಾ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ವಿದ್ಯಾರ್ಥಿಗಳು ಆ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾದ ಕುಲಪತಿ ಪ್ರೊ.ಜಯಕರ್ ಎಂ.ಎಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕರಾದ ಡಾ. ರಾಜೇಶ್ವರಿ ಆರ್, ಸಹ ಪ್ರಾಧ್ಯಾಪಕರಾದ ಡಾ. ವಾಹಿನಿ, ಡಾ.ಟಿ. ಶ್ರೀಪತಿ, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.

Related Posts

Leave a Reply

Your email address will not be published. Required fields are marked *