Thursday, February 27, 2025
Menu

ತಿರುಪತಿ ಲಡ್ಡು ಕಲಬೆರಕೆ: ತಪ್ಪೊಪ್ಪಿಕೊಂಡ ಡೈರಿ ಮಾಲೀಕ

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗೆ ಸರಬರಾಜು ಮಾಡಿದ ತುಪ್ಪದಲ್ಲಿ ಕಲಬೆರಕೆ ಮಾಡಿರುವುದನ್ನು 5ನೇ ಆರೋಪಿ ಅಪೂರ್ವ ಚಾವ್ಡಾ ವಿಶೇಷ ತನಿಖಾ ತಂಡದ  ತನಿಖೆ ವೇಳೆ  ಒಪ್ಪಿಕೊಂಡಿದ್ದಾರೆಂದು ವರದಿಯಾಗಿದೆ.  ತಾನು ಕೆಮಿಕಲ್ ಇಂಜಿನಿಯರಿಂಗ್ ಓದಿದ್ದು, ತುಪ್ಪದಲ್ಲಿ ರಾಸಾಯನಿಕ ಬೆರೆಸಿರುವುದನ್ನು ಒಪ್ಪಿಕೊಂಡಿದ್ದಾರೆ  ಎನ್ನಲಾ ಗಿದೆ.

ರಾಸಾಯನಿಕಗಳನ್ನು ಎಲ್ಲಿಂದ ಸಂಗ್ರಹಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಮತ್ತು ಯಾರ ಪಾತ್ರವಿದೆ ಎಂಬುದರ ಕುರಿತು ಹೆಚ್ಚಿನ ತನಿಖೆಗೆ ಎಸ್ಐಟಿ ಮುಂದಾಗಿದೆ.

ಅದಕ್ಕಾಗಿ ಅಪೂರ್ವ ಚಾವ್ಡಾ ಅವರನ್ನು ಮತ್ತೊಮ್ಮೆ ಕಸ್ಟಡಿಗೆ ಒಪ್ಪಿಸುವಂತೆ ತಿರುಪತಿಯ ಎರಡನೇ ಹೆಚ್ಚುವರಿ ಮುನ್ಸೀಫ್‌  ನ್ಯಾಯಾಲಯದಲ್ಲಿ ಎಸ್ಐಟಿ ಪರವಾಗಿ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಎ೩ ಆರೋಪಿ ವಿಪಿನ್ ಜೈನ್ ಅವರನ್ನೂ ಕಸ್ಟಡಿಗೆ ನೀಡುವಂತೆ ಕೋರಲಾಗಿತ್ತು. ಎಸ್ಐಟಿ ಪರವಾಗಿ ಸ್ಥಳೀಯ ಎಪಿಪಿ ಮತ್ತು ವಿಜಯವಾಡದ ಸಿಬಿಐ ನ್ಯಾಯಾಲಯದ ಎಪಿಪಿ ವಾದ ಆಲಿಸಿದರು.

ಭೋಲೆಬಾಬಾ ಸಾವಯವ ಡೈರಿ ನಿರ್ದೇಶಕರಾದ ವಿಪಿನ್ ಜೈನ್ (ಎ3) ಮತ್ತು ಪೊಮಿಲ್ ಜೈನ್ (ಎ4)  ವಕೀಲರು ಸಲ್ಲಿಸಿದ ಜಾಮೀನು ಅರ್ಜಿ ಹಿಂಪಡೆದಿದ್ದಾರೆ. ಕಸ್ಟಡಿ ಅರ್ಜಿ ಬಾಕಿ ಇರುವುದರಿಂದ ಜಾಮೀನು ಅರ್ಜಿಯನ್ನು ಹಿಂಪಡೆ ಯಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *