ಲಿಂಗಸುಗೂರು ಪಟ್ಟಣದ ಬಸ್ ಡಿಪೋ ವ್ಯವಸ್ಥಾಪಕ ರಾಹುಲ್ ಅವರ ಕಾರ್ಯವೈಖರಿಗೆ ಬಸ್ ಚಾಲಕ ಅಬ್ದುಲ್ ಸಾಬ ಬೇಸತ್ತು ಬಸ್ ಡಿಪೋದಲ್ಲೇ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಪತ್ರಕರ್ತರ ಜೊತೆ ಚಾಲಕ ಮಾತನಾಡಿ, ನಾನು 18ವರ್ಷದಿಂದ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ವ್ಯವಸ್ಥಾಪಕ ರಾಹುಲ್ ಚಾಲಕ ಹಾಗೂ ಕಂಡಕ್ಟರ್ ಗೆ ದಿನಾಲು ಕಿರುಕುಳ ನೀಡುತ್ತಿದ್ದು, ಈಗಾಗಲೇ 23 ಜನರನ್ನು ಅಮಾನತು ಮಾಡಿದ್ದಾರೆ. ಇಲ್ಲಿ ಯಾರು ನನಗೆ ಏನು ಮಾಡಲ್ಲ, ನಾನು ಹೇಳಿದಾಗೇ ನೀವು ಕೇಳಬೇಕು, ಇಲ್ಲ ಅಂದರೆ ನಿಮ್ಮನ್ನು ಸಸ್ಪೆಂಡ್ ಮಾಡುತ್ತೆನೆ ಎಂದು ಅವಾಜ್ ಹಾಕುತ್ತಾನೆಂದು ತಮ್ಮ ಅಳಲುನ್ನು ತೋಡಿಕೊಂಡಿದ್ದಾರೆ.
ನೀನು ಡಬಲ್ ಡ್ಯೂಟಿ ಮಾಡಬೇಕು. ಇಲ್ಲದಿದ್ದರೆ ನಿಮ್ಮನ್ನು ಸೇವೆಯಿಂದ ಅಮಾನತು ಮಾಡುತ್ತೆನೆ ಎಂದು ದಿನನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ಚಾಲಕ ಅಬ್ದುಲ್ ಸಾಬ ಆರೋಪಿಸಿದ್ದಾರೆ.