ಇನ್ನು ಮುಂದೆ ತತ್ಕಾಲ್ ಬುಕಿಂಗ್ ಮಾಡಿದವರಿಗೆ ಟಿಕೆಟ್ ಕನ್ಫರ್ಮ್ ಆಗಲಿದೆ. ಐಆರ್‌ಸಿಟಿಸಿಯಲ್ಲಿ ನಕಲಿ ಖಾತೆಗಳನ್ನು ರೈಲ್ವೆ ಆಡಳಿತವು ನಿಷ್ಕ್ರಿಯಗೊಳಿಸಿದ ನಂತರ ಟಿಕೆಟ್ ಬುಕಿಂಗ್ ಸಮಸ್ಯೆಗಳು ಬಗೆಹರಿಯಬಹುದು ಎಂದು ನಿರೀಕ್ಷಿಸಲಾಗಿದೆ.
ಟಿಕೆಟ್ ದಲ್ಲಾಳಿಗಳ ಹಾವಳಿ ಕಡಿಮೆಯಾಗುವ ಸಾಧ್ಯತೆಯಿದ್ದು, ನಕಲಿ ಖಾತೆಗಳನ್ನು ಬಳಸಿ ಟಿಕೆಟ್‌ಗಳನ್ನು ಕಬಳಸುತ್ತಿದ್ದ ದಲ್ಲಾಳಿಗಳಿಗೆ ಐಆರ್‌ಸಿಟಿಸಿ ಕಡಿವಾಣ ಹಾಕಿದೆ. ಟಿಕೆಟ್ ದಲ್ಲಾಳಿಗಳ ಹಾವಳಿಯಿಂದಾಗಿ ಪ್ರಯಾಣಿಕರಿಗೆ ತತ್ಕಾಲ್ ಟಿಕೆಟ್ ಪಡೆಯುವುದು ಕಷ್ಟವಾಗುತ್ತಿತ್ತು.
ಟಿಕೆಟ್ ಬುಕಿಂಗ್ ಸಮಸ್ಯೆಗಳಿಂದಾಗಿ ಪ್ರಯಾಣಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು.ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ತತ್ಕಾಲ್‌ನಲ್ಲಿ ಸುಗಮವಾಗಿ ಟಿಕೆಟ್ ಲಭ್ಯವಾಗಲಿದೆ.