ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮುಂದುವರಿದಿದ್ದು, ಪೊಲೀಸರ ಮೇಲೆ ಕಾರು ಹತ್ತಿಸುವುದಕ್ಕೂ ಮುಂದಾಗಿದ್ದಾರೆ. ರಾಜಗೋಪಲನಗರ ಠಾಣಾ ವ್ಯಾಪ್ತಿಯ ಬಾಟಲ್ ಮಾರ್ಕ್ ಬಾರ್ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ನಾಲ್ಕೈದು ಜನ ಮದ್ಯ ಸೇವಿಸುತ್ತಿದ್ದರು. ಅದೇ ವೇಳೆ ಸಬ್ ಇನ್ಸ್ಪೆಕ್ಟರ್ ಮುರಳಿ ನೈಟ್ ರೌಂಡ್ಸ್ ಮಾಡುತ್ತಿದ್ದರು.
ಟಿಂಟ್ ಇರೋ ಸ್ಕಾರ್ಪಿಯೋ ಕಾರಿನಲ್ಲಿ ಯಾರಿದ್ದಾರೆ ಎಂದು ಪಿಎಸ್ಐ ನೋಡುವಾಗ ಪುಂಡರು ಕಾರು ಹತ್ತಿ ರಿವರ್ಸ್ ತೆಗೆದಿದ್ದಾರೆ. ಪಿಎಸ್ ಐ ಕಾರ್ ನಿಲ್ಲಿಸುವಂತೆ ಡೋರ್ ಬಡಿದರೂ ಏಕಾಏಕಿ ಕಾರನ್ನು ವೇಗವಾಗಿ ತಿರುಗಿಸಿಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಪಿಎಸ್ ಐ ಕೈಗೆ ಗಾಯವಾಗಿ ರಕ್ತ ಸುರಿದಿದೆ.
ಕಾರಿನ ಮೇಲೆ ಜಯಕರ್ನಾಟಕ ಸಂಘಟನೆ ಹೆಸರಿದ್ದು, ಕಾರು ಜಾನ್ಸನ್ ಎಂಬಾತನಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಕಾರಿನಲ್ಲಿ ಎಸ್ಕೇಪ್ ಆಗಿದ್ದ ಪುಂಡರು, ಮತ್ತೆ ಸ್ಟೇಷನ್ ಬಳಿ ಬಂದು ಬೆದರಿಸಿದ್ದಲ್ಲದೆ ಫೇಸ್ ಬುಕ್ ನಲ್ಲಿ ಲೈವ್ ಬಂದು ಆವಾಜ್ ಹಾಕಿದ್ದಾರೆ. ಪೋಲಿಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪಿಎಸ್ ಐ ಮುರುಳಿ ದೂರು ನೀಡಿದ್ದಾರೆ.