Menu
12

ಬೀದರ್‌ನಲ್ಲಿ ನೀರಲ್ಲಿ ಮುಳುಗಿ ಮೂವರ ಸಾವು

ಬೀದರ್‌ನಲ್ಲಿ ಎರಡು ಸ್ಥಳಗಳಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರು ಪಾಲಾಗಿದ್ದಾರೆ. ಪ್ರಕಾಶ್(22), ಶಿವಾಜೀ (21) ಮತ್ತು ಆಕಾಶ್ ಕಂಟೆಪ್ಪ ಗುಂಗೆ (23) ಮೃತಪಟ್ಟವರು. ಪ್ರಕಾಶ್ ಹಾಗೂ ಶಿವಾಜೀ ಎಂಬ ಯುವಕರಿಬ್ಬರು ಚಿಟಗುಪ್ಪ ತಾಲೂಕಿನ ವಿಠಲಪುರ ಗ್ರಾಮದ ಐತಿಹಾಸಿಕ ಬಾವಿಯಲ್ಲಿ ಈಜಲು ತೆರಳಿದ್ದರು. ಆಳದ ಬಾವಿಯಲ್ಲಿ ಸಿಲುಕಿಕೊಂಡಿದ್ದ ಸ್ನೇಹಿತನನ್ನು ಕಾಪಾಡಲು ಹೋಗಿ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಹಾಗೂ ಪೊಲೀಸರು ಯುವಕರ ಮೃತದೇಹಗಳನ್ನು ಹೊರ ತೆಗೆದರು. ಬೆಮ್ಮಳಕೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದ ಕೆರೆಯಲ್ಲಿ ಆಕಾಶ್ ಕಂಟೆಪ್ಪ ಗುಂಗೆ ಎಂಬ ಯುವಕ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ನೇಹಿತರ ಜೊತೆ ಈಜಲು ಹೋಗಿದ್ದಾಗ ಈಜು ಬಾರದೆ ಆಕಾಶ್ ಮುಳುಗಿದ್ದಾನೆ. ಕೆರೆಯಲ್ಲಿ ಶೋಧ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಮೃತದೇಹವನ್ನು ಹೊರ ತೆಗೆದಿದ್ದಾರೆ. ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *