ಹಾಸನಾಂಬೆಯ ದರ್ಶನ ಪಡೆದುಕೊಂಡು ವಾಪಸಾಗುತ್ತಿದ್ದ ಎರಡು ಬೈಕ್‌ಗಳಿಗೆ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್ ಬಳಿ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಇಬ್ಬರು ಅಸು ನೀಗಿದ್ದಾರೆ. ಸ್ನೇಹಿತ ಬಸವರಾಜು ಜೊತೆಯಲ್ಲಿ ಬೆಂಗಳೂರಿನಿಂದ ಯಮಹಾ ಬೈಕ್‌ನಲ್ಲಿ ಅನು (19) ಹಾಗೂ ಛಾಯಾ (20) ಬಂದಿದ್ದರು. ಹಾಸನಾಂಬೆಯ ದರ್ಶನ ಪಡೆದು ಒಂದೇ ಬೈಕ್‌ನಲ್ಲಿ ಮೂವರು ತೆರಳುತ್ತಿದ್ದರು. ಚನ್ನರಾಯಪಟ್ಟಣ ಕಡೆಯಿಂದ ಬರುತ್ತಿದ್ದ ಕಾರು ಹೌಸಿಂಗ್ ಬೋರ್ಡ್ ಬಳಿ ವೇಗವಾಗಿ ಬಂದು ಮೊದಲು ಆಕ್ಟಿವಾಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಬೈಕ್‌ನಲ್ಲಿದ್ದ ಬಸವರಾಜು ಹಾಗೂ ಅನುಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಛಾಯಾ ಸ್ಥಿತಿ ಚಿಂತಾಜನಕವಾಗಿದ್ದು, ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಆಕ್ಟಿವಾ ಸವಾರ ಮೊಹಮ್ಮದ್ ಶಾಹಿದ್‌ಗೂ ಗಂಭೀರ ಗಾಯಗಳಾಗಿವೆ.
ಯುವತಿಯರು ಬಟ್ಟೆ ಬದಲಿಸುವ ವೀಡಿಯೊ: ಮತ್ತೊಬ್ಬ ಯುವತೆ ಅರೆಸ್ಟ್
ಮಂಗಳೂರಿನಲ್ಲಿ ಯುವತಿಯರು ಬಟ್ಟೆ ಬದಲಿಸುವ ವೀಡಿಯೊ ಮಾಡಿ ವೈರಲ್ ಮಾಡಿದ್ದ ಆರೋಪದಡಿ ಮತ್ತೊಬ್ಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಕಲಶದ ಯುವತಿ ಬಂಧಿತೆ. ಮಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಯರು ಅಲ್ಲಿನ ಕುದ್ಕೋರಿಗುಡ್ಡೆಯ ಮನೆಯೊಂದರಲ್ಲಿ ಬಾಡಿಗೆಗಿದ್ದರು. ಯುವತಿಯರಿಬ್ಬರು ಬಟ್ಟೆ ಬದಲಿಸುವ ವೀಡಿಯೊ ಮಾಡಿ ಕಾರ್ಕಳ ನಿವಾಸಿಯೊಬ್ಬನಿಗೆ ಕಳುಹಿಸಿದ್ದ ಆರೋಪ ಈ ಯುವತಿ ಮೇಲಿದೆ.
ಅ.9 ರಂದು ಕಾರ್ಕಳದಲ್ಲಿ ಆ ಯುವಕ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಡೆತ್‌ನೋಟ್‌ನಲ್ಲಿ ಯುವತಿ ಹಾಗೂ ಇತರರ ವಿರುದ್ಧ ಹನಿಟ್ರ‍್ಯಾಪ್ ಆರೋಪ ಮಾಡಿದ್ದ. ಯುವತಿ ತನ್ನ ರೂಮ್‌ನಲ್ಲಿದ್ದ ಇಬ್ಬರು ಯುವತಿಯರ ವೀಡಿಯೊ ವೈರಲ್ ಮಾಡಿದ್ದ ಬಗ್ಗೆಯೂ ಡೆತ್‌ನೋಟ್‌ನಲ್ಲಿ ಬರೆದಿದ್ದ. ಸಾಯುವ ಮೊದಲು ವಾಟ್ಸಪ್ ಗ್ರೂಪ್ ಮಾಡಿ ಅದರಲ್ಲಿ ಕೆಲವು ವೀಡಿಯೊ ಶೇರ್ ಮಾಡಿದ್ದ. ಅದರಲ್ಲಿ ಇಬ್ಬರು ಯುವತಿಯರ ವೀಡಿಯೊ ಇದ್ದ ಹಿನ್ನೆಲೆ ಕದ್ರಿ ಠಾಣೆಗೆ ಸಂತ್ರಸ್ತ ಯುವತಿಯರು ದೂರು ದಾಖಲಿಸಿದ್ದರು.