ಬೆಂಗಳೂರಿನಲ್ಲಿ ಶಿಕ್ಷಕಿ, ಗೃಹಿಣಿ ಹಾಗೂ ಹೆಡ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಯನಗರದ ಗೃಹಿಣಿ ಮಹೇಶ್ವರಿ (೪೯), ನೆಲಮಂಗಲದ ಬಸವಣ್ಣ ದೇವರ ಮಠದ ಶಿಕ್ಷಕಿ ಸುಲೋಚನಾ (49) ಮನೆಯಲ್ಲೇ ಕುಸಿದು ಬಿದ್ದು ಅಸು ನೀಗಿದ್ದಾರೆ.
ಸುಲೋಚನಾ ಅವರಿಗೆ ನೆಲಮಂಗಲದ ಭಕ್ತನಪಾಳ್ಯದ ತಮ್ಮ ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಅಲ್ಲೇ ಕುಸಿದುಬಿದ್ದು ಪ್ರಾಣ ಹೋಗಿದೆ. ಬೇಗೂರು ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ನಿಜಾಮುದ್ದಿನ್ (44) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಆಡುಗೋಡಿ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸವಿದ್ದ ನಿಜಾಮುದ್ದೀನ್‌ಗೆ ಅವರಿಗೆ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಪ್ರಾಣ ಹೋಗಿತ್ತು. ರಾಜ್ಯದ ಎಲ್ಲೆಡೆ ಸರಣಿ ಹೃದಯಾಘಾತದಿಂದ ಸಾವುಗಳು ವರದಿಯಾಗುತ್ತಲೇ ಇವೆ. ಸರ್ಕಾರ, ತಜ್ಞರು ಜೀವನಶೈಲಿಯೇ ಈ ಸಮಸ್ಯೆಗೆ ಕಾರಣ ಎನ್ನುತ್ತಿದ್ದಾರೆ.