ತ್ರಿ ಈಡಿಯಟ್ಸ್ ಚಿತ್ರದ ಸ್ಫೂರ್ತಿಯಾದ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿ ಜೋಧಪುರಕ್ಕೆ ರವಾನಿಸಿದೆ.
ಪ್ರಸ್ತುತ ಲಡಾಖ್ ನಲ್ಲಿ ನಡೆಯುತ್ತಿರುವ ಸಂಘರ್ಷ ಸೋನಮ್ ವಾಂಗ್ಚುಕ್ ಯುವಕರಿಗೆ ನೀಡಿದ ಪ್ರಚೋದನಕಾರಿಯೇ ಕಾರಣ ಎಂದು ಆರೋಪಿಸಲಾಗಿದೆ.
ನನ್ನನ್ನು ಯಾವುದೇ ಸಮಯದಲ್ಲಿ ಬಂಧಿಸಬಹುದು. ಬಂಧಿಸಿದರೆ ನಾನು ಅದನ್ನು ಸಂತೋಷವಾಗಿ ಸ್ವೀಕರಿಸುತ್ತೇನೆ ಎಂದು ಸೋನಮ್ ವಾಂಗ್ಚುಕ್ ಹೇಳಿಕೆ ನೀಡಿದ ಬೆನ್ನಲ್ಲೇ ಎನ್ ಐಎ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ನೂತನ ಕಾನೂನು ಅನ್ವಯ ಯಾವುದೇ ಜಾಮೀನು ನೀಡದೇ ದೀರ್ಘಕಾಲ ವಶಕ್ಕೆ ಪಡೆಯಬಹುದಾಗಿದೆ. ಸೋನಮ್ ಅವರನ್ನು ಗೌಪ್ಯ ಸ್ಥಳದಲ್ಲಿ ಇರಿಸಲಾಗಿದ್ದು, ಶನಿವಾರ ಬೆಳಿಗ್ಗೆ ಲಡಾಖ್ ನಿಂದ ಹೊರಗೆ ಜೋಧಪುರಕ್ಕೆ ಕರೆದೊಯ್ಯಲಾಗಿದೆ.
ಲಡಾಖ್ ನಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಿದೆ. ಸೋನಮ್ ವಾಂಗ್ಚುಕ್ ಅವರ ಸ್ಟೂಡೆಂಟ್ಸ್ ಎಜುಕೇಷನ್ ಅಂಡ್ ಕಲ್ಚರಲ್ ಮೂವ್ ಮೆಂಟ್ ಆಫ್ ಲಡಾಖ್ ಸಂಘಟನೆ ಅಕ್ರಮವಾಗಿ ವಿದೇಶದಿಂದ 3 ಲಕ್ಷ ರೂ. ದೇಣಿಗೆ ಪಡೆದ ಕಾರಣಕ್ಕೆ ಸಂಸ್ಥೆಯನ್ನೇ ರದ್ದುಗೊಳಿಸಿತ್ತು.