Menu

ಕುಡಿತದ ಚಟ ಬಿಡಿಸಲು ನೀಡಿದ ನಾಟಿ ಔಷಧಿಗೆ ಸೇಡಂನಲ್ಲಿ ಮೂವರು ಬಲಿ

ಕುಡಿತದ ಚಟ ಬಿಡಿಸುವುದಾಗಿ ನೀಡಲಾದ ನಾಟಿ ಔಷಧಿ ಸೇವಿಸಿ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಮೂವರು ಮೃತಪಟ್ಟಿದ್ದರೆ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುರಗಪಳ್ಳಿ ಗ್ರಾಮದ ಲಕ್ಷ್ಮೀ ನರಸಿಂಹಲು (45), ಶಹಬಾದ್ ಪಟ್ಟಣದ ಗಣೇಶ್ ರಾಠೋಡ್ (30), ಮತ್ತು ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಮೃತಪಟ್ಟವರೆಂದು ಗುರುತಿಸಲಾಗಿದೆ.

ಔಷಧಿಯನ್ನು ಸೇವಿಸಿದ ಲಕ್ಷ್ಮೀ ನರಸಿಂಹಲು ಅವರ ಪುತ್ರ ನಿಂಗಪ್ಪ ನರಸಿಂಹಲು ಗಂಭೀರ ಸ್ಥಿತಿಯಲ್ಲಿ ಇದ್ದು, ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿತದ ಚಟ ಬಿಡಿಸುವುದಾಗಿ ಸಾಯಪ್ಪ ಮುತ್ಯಾ ಎಂಬಾತ ಔಷಧಿಯನ್ನು ಮದ್ಯವ್ಯಸನಿಗಳ ಮೂಗಿನಲ್ಲಿ ಹಾಕಿದ್ದ. ಇದರಿಂದ ಲಕ್ಷ್ಮೀ ನರಸಿಂಹಲು ಮತ್ತು ಗಣೇಶ್ ರಾಠೋಡ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಔಷಧಿಯ ಸ್ವರೂಪ, ಸಾಯಪ್ಪ ಮುತ್ಯಾ ಈ ಔಷಧಿಯನ್ನು ಎಲ್ಲಿಂದ ಪಡೆದಿದ್ದ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *