Menu

20 ಅಡಿ ಆಳದ ಬಾವಿಯಲ್ಲಿ ಅನ್ನ ನೀರಿಲ್ಲದೆ ಮೂರು ದಿನ: ಒಟಿಪಿಯಿಂದ ಬದುಕಿದ ಜೀವ

ಆಕಸ್ಮಿಕವಾಗಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ 60 ವರ್ಷದ ವ್ಯಕ್ತಿಯೊಬ್ಬರು ಮೂರು ದಿನ ಅನ್ನ ನೀರು ಇಲ್ಲದೆ ಪವಾಡ ಸದೃಶವಾಗಿ ಸುರಕ್ಷಿತವಾಗಿ ಹೊರ ಬಂದಿರುವ ಘಟನೆ ಉಡುಪಿಯ ಕೊಡವೂರಿನಲ್ಲಿ ನಡೆದಿದೆ. ಇದಕ್ಕೆ ಕಾರಣ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಮೊಬೈಲ್‌ಗೆ ಬಂದಿರುವ ಒಟಿಪಿ.

60 ವರ್ಷದ ಶ್ರೀನಿವಾಸ ಭಟ್ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರು ತೋಟಕ್ಕೆ ನೀರು ಹಾಯಿಸಲು ತೆರಳಿದ್ದು, ಬಾವಿಗೆ ಹಾಕಿದ್ದ ಪಂಪ್​​ನಲ್ಲಿ ಕಸ ತುಂಬಿದ್ದು ಸ್ವಚ್ಛ ಮಾಡಲು ಬಾವಿ ಕಡೆಗೆ ತೆರಳಿದ್ದಾರೆ. ಪೈಪ್ ಎಳೆದಾಗ ಹಗ್ಗ ತುಂಡಾಗಿ ಅವರು ಆಯತಪ್ಪಿ 20 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ.

ಸುತ್ತ ಯಾರೂ ಇಲ್ಲದ ಕಾರಣ ಕೂಗಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಾವಿಯಲ್ಲಿದ್ದ ಪೈಪ್ ಹಿಡಿದು ಶ್ರೀನಿವಾಸ್​ ಮೂರು ದಿನ ಅನ್ನ ನೀಎಉ ಇಲ್ಲದಿದ್ದರೂ ಅಲ್ಲಿ ಗಟ್ಟಿಯಾಗಿ ಕೂತಿದ್ದರು. ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದ ಹಿನ್ನೆಲೆಯಲ್ಲಿ ಸಿಲಿಂಡರ್ ವಿತರಿಸಲು ಏಜೆನ್ಸಿಯವರು ಮನೆಗೆ ಬಂದಿದ್ದಾರೆ. ಸಿಲಿಂಡರ್ ನೀಡಲು ಒಟಿಪಿ ಕೇಳುವ ಉದ್ದೇಶದಿಂದ ಹುಡುಕಾಡಿದಾಗ ಬಾವಿಯ ಒಳಗಿನಿಂದ ವೃದ್ಧ ವ್ಯಕ್ತಿಯ ಕಿರುಚಾಟ ಕೇಳಿಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಗ್ಯಾಸ್ ಸಿಬ್ಬಂದಿ ಮತ್ತು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡವು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಿದೆ.

ಶ್ರೀನಿವಾಸ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ಯಾಸ್ ಸಿಲಿಂಡರ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಅವರ ಜೀವ ಉಳಿದಿದೆ.

Related Posts

Leave a Reply

Your email address will not be published. Required fields are marked *