Menu

ಮೂರು ಕೋಟಿ ರೂ. ಬೆಲೆಯ ಚಿನ್ನಾಭರಣ ದೋಚಿದಾತ ಅರೆಸ್ಟ್‌

ಮನೆಯೊಂದರಿಂದ ಮೂರು ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬೆಂಗಳೂರಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ವೇಲಾರಾಮ್ ಬಂಧಿತ ಆರೋಪಿ, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ. ಆರು ತಿಂಗಳು ಯೋಜನೆ ರೂಪಿಸಿ ಕಳವು ಮಾಡಿದ್ದ.

ಯಲಹಂಕ ಜ್ಯುಡಿಷಿಯಲ್ ಲೇಔಟ್​​​ನಲ್ಲಿನ ಮನೆ ಮಾಲೀಕರು ಅಮೆರಿಕದಲ್ಲಿ ನೆಲೆಸಿದ್ದರು. ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಮಾತ್ರ ಬೆಂಗಳೂರಿನಲ್ಲಿರುವ ಈ ಮನೆಗೆ ದಂಪತಿ ಬಂದು ಹೋಗುತ್ತಿದ್ದರು. ನಿರ್ಮಾಣ ಹಂತದ ಕಟ್ಟಡ ಕೆಲಸ ಮಾಡುತ್ತಿದ್ದ ಆರೋಪಿ ಇದನ್ನು ಗಮನಿಸಿದ್ದ.

ಮನೆಯ ಸ್ಲೈಡ್ ಡೋರ್ ಮೂಲಕ ಒಳಗೆ ಪ್ರವೇಶಿಸಿ, ಲಾಕರ್ ಒಪನ್ ಮಾಡಿ ಮೂರು ಕೋಟಿ ಬೆಲೆ ಬಾಳುವ 1 ಕೆಜಿ 800 ಗ್ರಾಂ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಕಳ್ಳತನ ಮಾಡಿದ್ದ. ಹೆಚ್ಚು ಪ್ರಮಾಣದ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ರಾಜಸ್ಥಾನಕ್ಕೆ ತೆರಳಿದ್ದ.

ಸಿಸಿಟಿವಿಯಲ್ಲಿ ಮನೆ ಮಾಲೀಕರು ಮೊಬೈಲ್ ಮೂಲಕ ಪರಿಶೀಲನೆ ನಡೆಸಿದಾಗ ಕಳ್ಳತನ ಗೊತ್ತಾಗಿದೆ. ಸಂಬಂಧಿಕರ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವೇಲಾರಾಮ್​​ನನ್ನು ಪೊಲೀಸರು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *