ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಜಾತಿ ನಿಂದನೆ ಕೇಸ್ಗೆ ಹೆದರಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೆಹಬೂಬ್(22) ಎಂಬ ಯುವಕ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದ ತಂದೆ ಸೈಯದ್ ಅಲಿ(50) ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾರೆ.
ಜಮೀನಿನಲ್ಲಿ ದಾರಿ ವಿಚಾರಕ್ಕೆ ಕಳೆದ ವಾರದ ಹಿಂದೆ ವಡಗೇರ ಪಟ್ಟಣದ ದಲಿತ ಕುಟುಂಬದ ಜೊತೆ ಜಗಳ ಉಂಟಾಗಿತ್ತು. ಜಗಳದ ಬಳಿಕ ಹಿರಿಯರು ಕುಳಿತು ನ್ಯಾಯ ಪಂಚಾಯತಿ ಮಾಡಿ ಬಗೆಹರಿಸಿದ್ದರು. ಆದರೆ ಬೇರೆ ಊರಿಂದ ಬಂದ ದಲಿತ ಮುಖಂಡ ಜಾತಿ ನಿಂದನೆ ಕೇಸ್ ದಾಖಲು ಮಾಡಿ ಜೈಲಿಗೆ ಕಳುಹಿಸುತ್ತೇನೆ ಎಂದು ಮೆಹಬೂಬ್ಗೆ ಬೆದರಿಕೆ ಹಾಕಿದ್ದರು. ಕೇಸ್ ದಾಖಲಾದರೆ ಮರ್ಯಾದೆ ಹೋಗುತ್ತೆ, ಜೈಲಿಗೆ ಹೋಗಬೇಕಾಗುತ್ತದೆ ಎಂದು ಮೆಹಬೂಬ್ ಹೆದರಿಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನ ಆತ್ಮಹತ್ಯೆ ಸುದ್ದಿ ತಿಳಿದು ಆಘಾತಗೊಂಡ ತಂದೆಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ.