ನೆಲಮಂಗಲದಲ್ಲಿ ವೃಷಭಾವತಿ ನೀರು ಕೆರೆಗೆ ಹರಿಸುವುದಕ್ಕೆ ವಿರೋಧಿಸುವವರು ರೈತರು ಅಲ್ಲ , ಅವರು ರೈತರ ವಿರೋಧಿಗಳು. ಕೋಲಾರದಲ್ಲೂ ವಿರೋಧ ಮಾಡಿದವರಿಗೆ ಏನೂ ಮಾಡೋದಕ್ಕೆ ಆಗಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ಹೇಳಿದ್ದಾರೆ.
ಸರಳ ಕಾವೇರಿ ಹಾಗೂ ಮನೆ ಬಾಗಿಲಿಗೆ ಸಂಚಾರಿ ಕಾವೇರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ೧೯೦೦ ಕೋಟಿ ರೂಪಾಯಿ ವೆಚ್ಚದಲ್ಲಿ ವೃಷಭಾ ವತಿ ಯೋಜನೆಗೆ ಕೊಟ್ಟಿದ್ದೇವೆ. ಬೆಂಗಳೂರಿನ ಕೊಳಚೆ ನೀರನ್ನ ಕ್ಲೀನ್ ಮಾಡಿ ಅದನ್ನ ಕರೆಗೆ ತುಂಬಿಸುವ ಯೋಜನೆಗೆ ಭೂಮಿಪೂಜೆ ಮಾಡಿದ್ದೇವೆ, ದೆಹಲಿ ಯಲ್ಲೂ ಇದೇ ರೀತಿ ಯೋಜನೆ ಮಾಡಿದ್ದಾರೆ ಎಂದರು.
ನಾವೂ ಇವತ್ತು ಮಾಫಿಯಾ ನೋಡಿದ್ದೇವೆ, 3 ಸಾವಿರ ಜನರು ಬೋರ್‌ವೆಲ್ ಹಾಕಿಕೊಂಡು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದಾರೆ. ಇವತ್ತು ನಾವೂ 6 ಸಾವಿರ ಲೀಟರ್ ಗೆ 740 ಪಿಕ್ಸ್ ಮಾಡಿ ಕಾವೇರಿ ನೀರು ವಿತರಣೆ ಮಾಡುತ್ತಿದ್ದೇವೆ. ಕಾವೇರಿಯಿಂದ ಶುದ್ದ ನೀರು ಹಂಚಿಕೆ ಮಾಡುತ್ತಿದ್ದೇವೆ. ನಾನು ಕಷ್ಟದಿಂದ ಇಂದು ಬೆಂಗಳೂರು ಉಸ್ತುವಾರಿ ತಗೆದುಕೊಂಡಿದ್ದೇನೆ. ಇದು ನನಗೆ ಚಾಲೇಂಜ್ ಆಗಿದೆ. ಕಾವೇರಿ ಆರತಿ ಮಾಡಲು 100 ಕೋಟಿ ವೆಚ್ಚ ಮಾಡುತ್ತಿದ್ದೇವೆ. ದಸರಾಗೆ ಕಾವೇರಿ ಆರತಿಗೆ ಚಾಲನೆ ನೀಡುತ್ತೇವೆ ಎಂದು ಹೇಳಿದರು.
ಪೆಟ್ರೋಲ್,. ಡಿಸೇಲ್ ಬೆಲೆ ಏರಿಕೆ ಆಗಿದೆ. ಆದರೆ ನೀರಿನ ದರ ಏರಿಕೆ ಆಗಿರಲಿಲ್ಲ, ದರ ಏರಿಸಿದ್ದೇವೆ. ಸರಳ ಕಾವೇರಿ, ಸಂಚಾರಿ ಕಾವೇರಿ ಶುರು ಮಾಡಿ ದ್ದೇವೆ. ಕುಡಿಯುವ ನೀರಿನ ಜೊತೆ ಒಳಚರಂಡಿ ಕೆಲಸ ಚೆನ್ನಾಗಿ ನಡೆಯುತ್ತಿದೆ. ಹಿಂದೆ ಬೆಂಗಳೂರು ನೀರು ಸರಬರಾಜು ಹಂಚಿಕೆಯನ್ನು ಖಾಸಗಿಗೆ ಕೊಡಲು ಹೊರಟಿ ದ್ದರು. ಆದರೆ ನಾವು ಖಾಸಗಿಗೆ ಕೊಡಲಿಲ್ಲ, ನೀರಿನ ಮಾಫಿಯಾ ತಡೆಯಲು ಕ್ರಮ ಕೈಗೊಂಡಿದ್ದೇವೆ ಎಂದರು.
ಕಸದ್ದೂ ಒಂದು ದೊಡ್ಡ ಮಾಫಿಯಾ. ಸಿಒಡಿ ಮೂಲಕ ತನಿಖೆ ಮಾಡಿಸಿದ್ದೇನೆ. ಸಾಕಷ್ಟು ದಾಖಲೆಗಳಿವೆ, ಇನ್ನೊಂದು ಮಾತನಾಡುವೆ. ಮನೆ ಬಾಗಿಲಿಗೆ ನೀರಿನ ಜತೆಗೆ ಆಸ್ತಿ ಖಾತೆಗಳನ್ನು ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ. ನಂಬಿಕೆ ನಕ್ಷೆ ಯೋಜನೆ ಮಾಡಿದ್ದೇವೆ. ಜನರು ನಂಬುತ್ರೋತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ ನನಗೆ ವಹಿಸಿದ ಕೆಲಸವನ್ನು ದೇವರ ಕೆಲಸ ಅಂತ ಮಾಡುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಈ ದೇಶದ ರಕ್ಷಣೆ ಮಾಡುವ ಯೋಧರಿಗೆ ಆತ್ಮ ಸ್ಥೈರ್ಯ ತುಂಬಲು ಹಾಗೂ ಐಕತ್ಯೆಗೋಸ್ಕರ ನಾವೂ ದೇಶದ ಜೊತಗೆ ಇದ್ದೇವೆ, ಅದಕ್ಕಾಗಿ ಇಂದು ೧೦ ಸಾವಿರಕ್ಕೂ ಹೆಚ್ಚು ಜನರು ಸೇರಿ ತಿರಂಗಾ ಯಾತ್ರೆ ಮಾಡಿದ್ದೇವೆ. ಭಾರತದ ಯಾವ ನಗರದಲ್ಲೂ ಈ ರೀತಿಯ ಯೋಜನೆ ಮಾಡಿಲ್ಲ. ಬೆಂಗಳೂರಲ್ಲಿ ಭದ್ರತೆ ಹೆಚ್ಚಳ ವಿಚಾರಕ್ಕೆ ಅಧಿಕಾರಿಗಳು ಏನ್ ಮಾಡಬೇಕು, ಎಲ್ಲವೂ ಮಾಡುತ್ತಿದ್ದಾರೆ. ನಾವು ಡೈರೆಕ್ಷನ್ ಕೊಡುತ್ತಿದ್ದೇವೆ, ಯೋಧರಿಗೆ ಆತ್ಮ ಧೈರ್ಯ ನೀಡಿದ್ದೇವೆ. ಕ್ಯಾಬಿನೆಟ್ ನಲ್ಲೂ ಪ್ರಸ್ತಾಪ ಮಾಡಿ ಸಂಜೆ ತಿಳಿಸುತ್ತೇವೆ ಎಂದರು.
ರಾಜ್ಯ ದ ಡ್ಯಾಮ್ ಗಳಲ್ಲಿ ಭದ್ರತೆ ವಿಚಾರದಲ್ಲಿ ನಾವು ರಿಸ್ಕ್ ತೆಗೆದುಕೊಳ್ಳೋದು ಬೇಡ, ಯಾಮಾರೋದು ಬೇಡ. ಎಲ್ಲಾ ಡ್ಯಾಮ್ ಗೂ ಭದ್ರತೆ ನೀಡಿದ್ದೇವೆ. ಯಾವ ಪ್ರವಾಸಿಗಳಿಗೂ ಅವಕಾಶ ಕೊಡುವುದು ಬೇಡ, ಟೆಕ್ನಿಕಲ್ ಅವರಿಗೆ ಮಾತ್ರ ಎಂಟ್ರಿ ಇರುತ್ತದೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು, ಎಲ್ಲಿ ಏನೂ ಬೇಕಾದರೂ ಆಗಬಹುದು, ಇದಕ್ಕಾಗಿ ನಾವು ಸುರಕ್ಷಿತ ಆಗಿರಬೇಕು ಎಂದು ಡಿಸಿಎಂ ಹೇಳಿದರು.