ಶಿವಮೊಗ್ಗದ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವವ ಮನೆಯೊಂದರಲ್ಲಿ ನಗದು ಮತ್ತು 15 ಲಕ್ಷ ರೂಪಾಯಿಗಳ ಒಡವೆ ಕಳ್ಳತನವಾಗಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಈ ಮನೆಯ ಮಾಲೀಕ ಗೋಪಾಲ್ ಎಂಬವರು ಆರೋಗ್ಯ ಸಮಸ್ಯೆಯಿಂದ ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಮಗಳು ಮುಂಬೈಗೆ ಗೆ ಹೋಗಿದ್ದ ವೇಳೆ ಕಳ್ಳರು ಕಳ್ಳತನ ಮಾಡಿದ್ದಾರೆ. ಮನೆಯ ಗೇಟ್ಗೆ ಬೀಗ ಹಾಕಿದ್ದುದ್ದರಿಂದ ಕಾಂಪೌಂಡ್ ಹಾರಿ ಮನೆಯ ಬೀರುವಿನ ಲಾಕರ್ ಒಡೆದು, ಒಳಗೆ ನುಗಿದ್ದ ಕಳ್ಳರು ಒಡವೆಗಳನ್ನು ಕಳ್ಳತನ ಮಾಡಿದ್ದಾರೆ.
ಪಕ್ಕದ ಮನೆಯಲ್ಲಿ ದ್ವಿಚಕ್ರ ವಾಹನವನ್ನೂ ಕಳವು ಮಾಡಿದ್ದು, ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತರ ಮನೆಗಳಲ್ಲೂ ಕಳ್ಳತನ ಯತ್ನ ನಡೆದಿದ್ದು, ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ. ಕಳ್ಳರು ಮುಖಕ್ಕೆ ಮಾಸ್ಕ್, ಕೈಯಲ್ಲಿ ಮಚ್ಚು ಲಾಂಗ್ ಹಾಗೂ ಕಲ್ಲು ಹಿಡಿದುಕೊಂಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಒಂದೇ ಬೈಕ್ನಲ್ಲಿ ಈ ಮೂವರು ಕಳ್ಳರು ಬಂದಿದ್ದರು. ಮನೆಯಲ್ಲಿ ಕಳ್ಳತನ ಆಗಿರುವುದನ್ನು ಗಮನಿಸಿದ ಪಕ್ಕದ ಮನೆಯವರು ಬಾಂಬೆಯಲ್ಲಿದ್ದ ವಿಜಯಲಕ್ಷ್ಮಿ ಅವರಿಗೆ ಮಾಹಿತಿ ನೀಡಿದ್ದಾರೆ. ವಿಜಯಲಕ್ಷ್ಮಿ ಅವರು ಭದ್ರಾವತಿಯಲ್ಲಿರುವ ಸಹೋದರ ಚಂದ್ರಶೇಖರ್ ಅವರಿಗೆ ಕರೆ ಮಾಡಿ ಮನೆಯ ಬಳಿ ಹೋಗಿ ಪರಿಶೀಲಿಸುವಂತೆ ಹೇಳಿದ್ದಾರೆ. ಚಂದ್ರಶೇಖರ್ ಬಂದು ನೋಡಿದಾಗ ಕಳ್ಳತನ ಆಗಿರುವುದು ಬಹಿರಂಗವಾಗಿದೆ. ಈ ಬಡವಾಣೆ ಪಕ್ಕವಿರುವ ಪೊಲೀಸ್ ಬಡವಾಣೆಯಲ್ಲಿ ಎರಡು ಮನೆಯ ಕಿಟಕಿ ಮುರಿದು ಕಳ್ಳತನ ಮಾಡಲು ಯತ್ನಿಸಲಾಗಿದೆ.


