ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ನಟೋರಿಯಸ್ ಕಳ್ಳನನ್ನು ಜೀವದ ಹಂಗು ತೊರೆದು ಆನೇಕಲ್ ತಾಲೂಕಿನ ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಕನಕಪುರದ ಮುಳ್ಳಳ್ಳಿ ನಿವಾಸಿ ಶಿವಕುಮಾರ್(35) ಬಂಧಿತ.
ಮೂರು ಬೈಕ್ ಸೇರಿದಂತೆ 130 ಗ್ರಾಂ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕಗಳಲ್ಲಿ ಕೊಲೆ, ಸುಲಿಗೆ, ಬೈಕ್ ಕಳವು, ಮನೆಗಳ್ಳತನ ಸೇರಿದಂತೆ 60 ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ. ಜಿಗಣಿ ಸೇರಿದಂತೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 13 ಪ್ರಕರಣ ದಾಖಲಾಗಿವೆ.
ಕಳೆದ ಸೆಪ್ಟೆಂಬರ್ನಲ್ಲಿ ಜಿಗಣಿಯಲ್ಲಿ ಬೈಕ್ ಕಳವು ಮಾಡಿದ್ದು, ಪೊಲೀಸರು ಆ ಕೇಸ್ನ ಬೆನ್ನು ಹತ್ತಿದ್ದರು. ಸಿಸಿ ಕ್ಯಾಮರಾಗಳ ಪರಿಶೀಲನೆ ವೇಳೆ ಪೊಲೀಸರಿಗೆ ಆರೋಪಿ ಬಗ್ಗೆ ಸುಳಿವು ಸಿಕ್ಕಿತ್ತು, ಆತ ಅಕ್ಕನ ಮನೆಗೆ ಬಂದು ಹೋಗುವ ಬಗ್ಗೆ ಮಾಹಿತಿ
ಯೂ ಲಭಿಸಿತ್ತು. ಆದರೆ ಆತ ಬಂದಷ್ಟೇ ವೇಗದಲ್ಲಿ ಮಾಯವಾಗುತ್ತಿದ್ದ. ಬಳಿಕ ಸಮೀಪದ ಮನೆಯೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದ,
ಆರೋಪಿ ಶಿವಕುಮಾರ ಮನೆ ಬಳಿ ರಸ್ತೆಯಲ್ಲಿ ನಿಂತು ಅಕ್ಕನ ಮಕ್ಕಳ ಜೊತೆ ಮಾತನಾಡುತ್ತಿದ್ದ. ಬೈಕ್ ಆನ್ ಇಟ್ಟುಕೊಂಡೇ ಮಾತನಾಡುತ್ತಿದ್ದ. ಸಣ್ಣ ಅನುಮಾನ ಬಂದರೂ ಮನೆ ಕಡೆ ಸುಳಿಯುತ್ತಿರಲಿಲ್ಲ, ಮೊಬೈಲ್ ಬಳಸುತ್ತಿರಲಿಲ್ಲ. ಆದರೂ ಶನಿವಾರ ಸ್ಥಳಕ್ಕಾಗಮಿಸಿದ ಪೊಲೀಸರು ಬೈಕ್ ಕೆಳಗೆ ಬೀಳಿಸಿ ಹರಸಾಹಸಪಟ್ಟು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಜಿಗಣಿ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿ ಶಿವಕುಮಾರ್ ಮೊದಲು ಬೈಕ್ ಕದಿಯುತ್ತಿದ್ದ, ಕದ್ದ ಬೈಕ್ನಲ್ಲಿ ಚೈನ್ ಸ್ನ್ಯಾಚಿಂಗ್, ಮನೆಗಳ್ಳತನಕ್ಕೆ ಇಳಿಯುತ್ತಿದ್ದ
ಪೊಲೀಸರಿಗೆ ಸಣ್ಣ ಸುಳಿವು ಬಿಡದೆ ಪರಾರಿಯಾಗುತ್ತಿದ್ದ.
ಬೆಂಗಳೂರಿನ ಶಿವಾಜಿ ನಗರದ ಜೆಟ್ ಕಿಂಗ್ಸ್ ಇನ್ಸ್ಟಿಟ್ಯೂಟ್ ನಲ್ಲಿ ಮ್ಯಾನೇಜ್ಮೆಂಟ್ ಆಫ್ ನೆಟ್ವರ್ಕಿಂಗ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಮಾಡಿರುವ ಆರೋಪಿ ಟೆಕ್ನಿಕಲಿ ಕೂಡಸಣ್ಣ ಸುಳಿವು ಸಿಗದಂತೆ ಕೃತ್ಯವೆಸಗುತ್ತಿದ್ದ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ.


