ಧರ್ಮಸ್ಥಳ ಪ್ರಕರಣದಲ್ಲಿ ಭಯೋತ್ಪಾದಕ ಜಾಲ ಇದೆ. ನಗರ ನಕ್ಸಲರ ಜಾಲ ಧರ್ಮಸ್ಥಳ ಪ್ರಕರಣಕ್ಕೆ ಕಥೆ ಕಟ್ಟಿ ಏನೋ ಮಾಡಲಿಕ್ಕೆ ಹೊರಟಿದ್ದಾರೆ. ಸರ್ಕಾರ ಈ ಬಗ್ಗೆ ಎಚ್ಚರಿಕೆಯಿಂದ ಡೀಲ್ ಮಾಡಬೇಕು. ಇದರ ಹಿಂದೆ ಭಯೋತ್ಪಾದಕ ಚಟುವಟಿಕೆಯ ದೊಡ್ಡ ದೊಡ್ಡ ಸಂಸ್ಥೆಗಳ ಕೈವಾಡ ಇದೆ. ಧರ್ಮಸ್ಥಳ ಹಿಂದೂಗಳ ಧಾರ್ಮಿಕ ಕೇಂದ್ರ. ಧರ್ಮಸ್ಥಳದ ಹೆಗ್ಗಡೆಯವರ ಲಿಂಕ್ ಮಾಡೋ ಪ್ರಯತ್ನ ನಡೀತಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಧರ್ಮಸ್ಥಳವನ್ನ ಸ್ಪೋಟಿಸಲು ಉಗ್ರ ಶಾರೀಕ್ ಪ್ಲಾನ್ ಮಾಡಿದ್ದ. ಶಾರೀಕ್ ತೀರ್ಥಹಳ್ಳಿಯವನು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ್ದ. ಇಡಿ ಶಾರೀಕ್ ಅಕೌಂಟ್ ನಲ್ಲಿದ್ದ 29 ಸಾವಿರ ಮುಟ್ಟುಗೋಲು ಹಾಕಿಕೊಂಡಿದೆ. ಆಗ ನಾನು ಗೃಹ ಸಚಿವನಾಗಿದ್ದೆ. ಧರ್ಮಸ್ಥಳ ದೇವಸ್ಥಾನವನ್ನೇ ಬ್ಲಾಸ್ಟ್ ಮಾಡಲು ಹೊರಟಿದ್ದ ಎಂದರು.
ಧರ್ಮಸ್ಥಳ ಪ್ರಕರಣ ಖಂಡಿತವಾಗಿಯೂ ಇದು ಖಂಡನಾರ್ಹ, ಭಯೋತ್ಪಾದನೆ ಚಟುವಟಿಕೆಯಿದೆ. ವಿದೇಶಿ ಪಂಡಿಂಗ್ ಇದೆ. ಎಷ್ಟು ಜನ ಲಾಯರ್ ಗಳಿದ್ದಾರೆ, ಅವರಿಗೆ ಯಾರು ಫೀಸ್ ಕೊಡುತ್ತಿದ್ದಾರೆ 20-25 ಜನ ಲಾಯರ್ ಗಳಿದ್ದಾರೆ, ಅವರಿಗೆಲ್ಲಾ ಯಾರು ಪೀಸ್ ಕೊಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಹಿಂದೂ ಶ್ರದ್ಧಾ ಕೇಂದ್ರಗಳನ್ನು ಭಂಗ ಮಾಡಬೇಕು ಎನ್ನುವ ಚಟುವಟಿಕೆ ದೇಶದಲ್ಲಿ ನಡೆಯುತ್ತಿದೆ. ಇದನ್ನು ಖಂಡಿಸುತ್ತೇನೆ, ಸರಿಯಾದ ತನಿಖೆ ಆಗಬೇಕು ಎಂದು ಹೇಳಿದರು.
ಮುಸುಕುಧಾರಿಯ ಹಿನ್ನಲೆಯೇನು, ಆತನಿಗೆ ಪಂಡಿಂಗ್ ಯಾರು ಎಲ್ಲಾ ಹೊರ ಬರಬೇಕು, ಯಾರದ್ದೋ ಕೊಲೆ ಭೇದಿಸುವುದಕ್ಕಿಂತ ಧರ್ಮಸ್ಥಳ ಹಾಳು ಮಾಡುವ ಉದ್ದೇಶ ಇದೆ. ವಿರೇಂದ್ರ ಹೆಗ್ಗಡೆಯವರನ್ನು ಇದಕ್ಕೆ ಲಿಂಕ್ ಮಾಡುವ ಪಿತೂರಿ ನಡೆಯುತ್ತಿದೆ. ಇದರ ಹಿಂದೆ ಇರುವ ಜಾಲವನ್ನ ಭೇದಿಸಬೇಕು. ಯಾರದ್ದೋ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ ಅನಿಸುತ್ತಿದೆ. ಯೂಟ್ಯೂಬರ್ಸ್ ಗಳು ಮಾಡಬಾರದ್ದು ಮಾಡಿದ್ದಾರೆ, ಧರ್ಮಸ್ಥಳದ ಅವಹೆಳನ ಮಾಡಿ ತಲೆಹರಟೆ ಮಾಡಿದ್ದಾರೆ ಎಂದರು.
ಸರಿಯಾದ ತನಿಖೆ ನಡೆದು ಧರ್ಮಸ್ಥಳ ದೋಷಮುಕ್ತವಾಗಲಿ, ಪಿತೂರಿ ಮಾಡುವರಿಗೆ ಹಿನ್ನಡೆಯಾಗಲಿ. ಒಂದು ಸರ್ಕಾರ ಮಾಡುವ ಕೆಲಸ ಧರ್ಮಸ್ಥಳ ಮಾಡುತ್ತಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಮೂಲಕ ಕೆರೆ ಅಭಿವೃದ್ಧಿ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.