Menu

15 ತಿಂಗಳ ತಡವಾಗಿ ಭಾರತಕ್ಕೆ ಬಂದಿಳಿದ ವಿಶ್ವದ ಅಪಾಯಕಾರಿ ಅಪಾಚೆ ಹೆಲಿಕಾಫ್ಟರ್!

apachi helechopter

ವಿಶ್ವದ ಅತ್ಯಂತ ಅಪಾಯಕಾರಿ ದಾಳಿ ನಡೆಸುವಲ್ಲಿ ಹೆಸರುವಾಸಿಯಾದ ಅಪಾಚಿ ಹೆಲಿಕಾಫ್ಟರ್ ನ ಮೊದಲ ಕಂತು ಮಂಗಳವಾರ ಭಾರತಕ್ಕೆ ಬಂದಿಳಿದಿದೆ.

15 ತಿಂಗಳು ತಡವಾಗಿ ರಾಜಸ್ಥಾನದ ಜೋಧ್‌ಪುರದಲ್ಲಿ ಮಂಗಳವಾರ ಬೆಳಿಗ್ಗೆ 6 ಬೋಯಿಂಗ್ ಎಚ್ 64ಇ ವಿಮಾನದಲ್ಲಿ ಮೂರು ಅಪಾಚೆ ಹೆಲಿಕಾಫ್ಟರ್ ಗಳು ಬಂದಿಳಿದಿವೆ.

ಹೈದರಾಬಾದ್‌ನ ಹೊರವಲಯದಲ್ಲಿ ಟಾಟಾ-ಬೋಯಿಂಗ್ ಜಂಟಿ ಉದ್ಯಮದಿಂದ ನಿರ್ಮಿಸಲಾದ ಫ್ಯೂಸ್‌ ಲೇಜ್‌ಗಳನ್ನು ಹೊಂದಿರುವ ಮರುಭೂಮಿ ಕ್ಯಾಮೊ ಪೇಂಟ್ ಹೆಲಿಕಾಪ್ಟರ್‌ಗಳು ಪಾಕಿಸ್ತಾನ ಗಡಿಯಲ್ಲಿ ಗಸ್ತಿಗೆ ಅಪಾಚೆ ಹೆಲಿಕಾಫ್ಟರ್ ಗಳು ನಿಯೋಜನೆಗೊಳ್ಳಲಿವೆ.

ಭಾರತೀಯ ನಿರ್ಮಿತ ಧ್ರುವ, ರುದ್ರ ಮತ್ತು ಪ್ರಚಂಡ ಹೆಲಿಕಾಪ್ಟರ್‌ಗಳನ್ನು ಒಳಗೊಂಡಿರುವ ಭಾರತೀಯ ಸೇನೆಗೆ ಇದೀಗ ರೋಟರ್‌ ಕ್ರಾಫ್ಟ್ ಫ್ಲೀಟ್‌ ಅಪಾಚಿ ಹೆಲಿಕಾಫ್ಟರ್ ಗಳ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ.

ಭಾರತೀಯ ಸೇನೆಯ ಅಪಾಚೆ ಹೆಲಿಕಾಪ್ಟರ್‌ಗಳು ದೇಶದಲ್ಲಿ ಮೊದಲನೆಯದಲ್ಲ. ಪಠಾಣ್‌ಕೋಟ್ ಮತ್ತು ಜೋರ್ಹತ್‌ನಲ್ಲಿ ನೆಲೆಗೊಂಡಿರುವ ಈ ರೀತಿಯ ಎರಡು ಸ್ಕ್ವಾಡ್ರನ್‌ಗಳನ್ನು ಭಾರತೀಯ ವಾಯುಪಡೆಯು ನಿರ್ವಹಿಸುತ್ತದೆ. ಈ ಹೆಲಿಕಾಫ್ಟರ್ ಗಳು ಚೀನಾ ಗಡಿಯಲ್ಲಿ ಗಸ್ತು ನೋಡಿಕೊಳ್ಳುತ್ತಿವೆ.

ಭಾರೀ ಶಸ್ತ್ರಸಜ್ಜಿತವಾದ ಅಪಾಚೆಯ ಶಸ್ತ್ರಾಗಾರದಲ್ಲಿ ನಿಕಟ ಬೆಂಬಲಕ್ಕಾಗಿ 30 ಎಂಎಂ M230 ಚೈನ್ ಗನ್, ಪರಿಸರ ಮೇಲೆ ದುಷ್ಪರಿಣಾಮ ಬೀರದ 70 ಎಂಎಂ ಹೈಡ್ರಾ ರಾಕೆಟ್‌ಗಳು ಮತ್ತು 6 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದಿಂದ ಶಸ್ತ್ರಸಜ್ಜಿತ ವಾಹನಗಳು ಮತ್ತು ಟ್ಯಾಂಕ್‌ಗಳನ್ನು ನಾಶಪಡಿಸುವ ಎಜಿಎಂ-114 ಹೆಲ್‌ಫೈರ್ ಕ್ಷಿಪಣಿಗಳು ಚೀನಾ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ವೈಮಾನಿಕ ದಾಳಿ ಭೀತರಿ ತಡೆಯಲು ಸ್ಟಿಂಗರ್ ಕ್ಷಿಪಣಿಗಳನ್ನು ಅಪಾಚಿ ಹೆಲಿಕಾಫ್ಟರ್ ಗಳು ಒಯ್ಯುತ್ತದೆ. ಇದು ಟ್ಯಾಂಕ್‌ಗಳಿಗೆ ಮಾತ್ರವಲ್ಲದೆ ಹೆಲಿಕಾಪ್ಟರ್‌ಗಳು ಮತ್ತು ಯುಎವಿಗಳಿಗೂ ಮಾರಕವಾಗಿಸುತ್ತದೆ. ಅಪಾಚೆಯ ಭಾರತೀಯ ಸೇನೆ ಮತ್ತು ಐಎಎಫ್ ಆವೃತ್ತಿಗಳು ಒಂದೇ ಆಗಿರುತ್ತವೆ.

Related Posts

Leave a Reply

Your email address will not be published. Required fields are marked *