Menu

ಯುದ್ಧ, ಸಾಂಕ್ರಾಮಿಕ ಕಾಯಿಲೆಗೆ ಜಗತ್ತು ತತ್ತರ: ನಾಸ್ಟ್ರಾಡಾಮಸ್ 2025 ಭವಿಷ್ಯ

ಯುದ್ಧ ಭೀಕರತೆ, ಕ್ಷುದ್ರಗ್ರಹ ಹಾವಳಿ, ಸಾಂಕ್ರಾಮಿಕ ರೋಗಗಳಿಂದ ಯುರೋಪ್ ದೇಶಗಳು ತತ್ತರಿಸಲಿವೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ.

ಫ್ರಾನ್ಸ್ ನ ಜ್ಯೋತಿಷಿ ಹಾಗೂ ವೈದ್ಯರಗಿದ್ದ ನಾಸ್ಟ್ರಾಡಾಮಸ್ ಜಗತ್ತಿನ ಅತ್ಯಂತ ನಿಖರ ಭವಿಷ್ಯ ಹೇಳುವುದರಲ್ಲಿ ಎತ್ತಿದ ಕೈ. ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಏರುವುದು, ಸೆಪ್ಟೆಂಬರ್ 11ರ ದಾಳಿ, ಮತ್ತು COVID-19 ಸಾಂಕ್ರಾಮಿಕದಂತಹ ಜಗತ್ತಿನ ಹಲವು ಪ್ರಮುಖ ಘಟನೆಗಳ ಬಗ್ಗೆ ಅವರು ನೀಡಿದ್ದ ಭವಿಷ್ಯ ನಿಖರವಾಗಿದ್ದರಿಂದ ಅವರ ಭವಿಷ್ಯವಾಣಿಗಳ ಬಗ್ಗೆ ಜನರು ಕುತೂಹಲ ಹೊಂದಿದ್ದಾರೆ.

ನಾಸ್ಟ್ರಾಡಾಮಸ್ ನುಡಿದ ಸಂಕೇತಗಳ ಜ್ಯೋತಿಷ್ಯಗಳ ಬಗ್ಗೆ ಸಂಶೋಧಕರು ತಿಳಿಯುವ ಪ್ರಯತ್ನ ಮಾಡುತ್ತಲೇ ಬಂದಿದ್ದು, 2025ರಲ್ಲಿ ಕ್ಷುದ್ರಗ್ರಹ ಘರ್ಷಣೆಯಿಂದ ಬ್ರಿಟನ್ ನಲ್ಲಿ ಪ್ಲೇಗ್ ಮಾದರಿಯ ಸಾಂಕ್ರಾಮಿಕ ರೋಗಳು ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಅಂತ್ಯ?

ನಾಸ್ಟ್ರಾಡಾಮಸ್‌ 2024ರಲ್ಲಿ ಯುರೋಪ್ ಖಂಡದಾದ್ಯಂತದ ಯುದ್ಧ ಭೀತಿ ಬಗ್ಗೆ ಎಚ್ಚರಿಸಿದ್ದರು. ಇದು ನಿಜವಾಗಿದ್ದು, 2025ರಲ್ಲಿ ಯುದ್ಧ ಅಂತ್ಯಗೊಳ್ಳಬಹುದು ಎಂದು ಹೇಳಿದ್ದಾರೆ. ಈ ಮೂಲಕ 2022ರಲ್ಲಿ ಪ್ರಾರಂಭವಾದ ರಷ್ಯಾ-ಉಕ್ರೇನ್ ನಡುವಿನ ಯುದ್ಧ ೨೦೦೨೫ರಲ್ಲಿ ಅಂತ್ಯಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ದೀರ್ಘ ಯುದ್ಧದ ಮೂಲಕ ಎಲ್ಲಾ ಸೈನ್ಯವು ದಣಿದಿದೆ, ಆದ್ದರಿಂದ ಅವರು ಸೈನಿಕರಿಗೆ ಹಣವನ್ನು ಕಂಡುಹಿಡಿಯಲಿಲ್ಲ; ಚಿನ್ನ ಅಥವಾ ಬೆಳ್ಳಿಯ ಬದಲಿಗೆ, ಅವರು ಚರ್ಮ, ಗಾಲಿಕ್ ಹಿತ್ತಾಳೆ ಮತ್ತು ಚಂದ್ರನ ಅರ್ಧಚಂದ್ರಾಕೃತಿಯ ನಾಣ್ಯಕ್ಕೆ ಬರುತ್ತಾರೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ.

“ಗ್ಯಾಲಿಕ್ ಹಿತ್ತಾಳೆ” ಮತ್ತು “ಚಂದ್ರನ ಚಿಹ್ನೆ” ಯ ಅರ್ಥವನ್ನು ಫ್ರಾನ್ಸ್ ಮತ್ತು ಟರ್ಕಿ ನಡುವೆ ಯುದ್ಧ ಸಂಭವಿಸಹುದು ಎಂದು ವಿಶ್ಲೇಷಿಸಲಾಗಿದೆ.

ಯುದ್ಧ ಮತ್ತು ಸಾಂಕ್ರಾಮಿಕ ರೋಗ

೨೦೨೫ರ ಆರಂಭದಲ್ಲಿ ಯುದ್ಧಗಳಿಂದಾಗಿ ಇಂಗ್ಲೆಂಡ್‌ಗೆ ಹೆಚ್ಚು ಹಾನಿ ಅನುಭವಿಸಲಿದೆ. “ಶತ್ರುಗಳ ದಾಳಿಗಿಂತ ಭೀಕರ ಎಂದು ಹೇಳಲಾಗುವ ಪ್ಲೇಗ್ ಮಾದರಿಯ ಸಾಂಕ್ರಾಮಿಕ ಕಾಯಿಲೆ ದೇಶವನ್ನು ಕಾಡಬಹುದು ಎಂದು ನಾಸ್ಟ್ರಾಡಾಮಸ್ ನುಡಿದಿದ್ದಾರೆ.

ಭೂಮಿಗೆ ಕ್ಷುದ್ರಗ್ರಹ ಡಿಕ್ಕಿ?

2025 ಭೂಮಿಯೊಂದಿಗೆ ದೈತ್ಯ ಕ್ಷುದ್ರಗ್ರಹ ಘರ್ಷಣೆ ಆಗಬಹುದು. ಇದರಿಂದ ಹಾನಿಯೂ ಸಂಭವಿಸಬಹುದು ಎಂದು ಹೇಳಲಾಗಿದೆ. ಆದರೆ ಸಂಶೋಧಕರ ಪ್ರಕಾರ ಈಗಾಗಲೇ ಹಲವಾರು ಕ್ಷುದ್ರಗ್ರಹಗಳು ಭೂಮಿಯ ಅತೀ ಸಮೀಪ ಬಂದು ಹೋಗಿವೆ. ಈ ಬಾರಿಯೂ ಹತ್ತಿರ ಬಂದು ಹೋಗಬಹುದೇ ಹೊರತು ಭೂಮಿಯ ಮೇಲೆ ಅಪ್ಪಿಳಿಸಿ ದೊಡ್ಡ ಹಾನಿ ಸಂಭವಿಸುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಿಸಿದ್ದಾರೆ.

ಬ್ರೆಜಿನ್ ನಲ್ಲಿ ಪ್ರಾಕೃತಿಕ ವಿಕೋಪ

ನಾಸ್ಟ್ರಾಡಾಮಸ್ “ಗಾರ್ಡನ್ ಆಫ್ ದಿ ವರ್ಲ್ಡ್” ಎಂದು ಉಲ್ಲೇಖಿಸುವ ದಕ್ಷಿಣ ಅಮೆರಿಕಾದ ಬ್ರೆಜಿಲ್ ದೇಶವು ಹವಾಮಾನ ಬದಲಾವಣೆಯಿಂದ ಪ್ರವಾಹ ಮತ್ತು ಸಂಭಾವ್ಯ ಜ್ವಾಲಾಮುಖಿಗಳಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಹೊಸ ನಗರದ ಸಮೀಪವಿರುವ ಪ್ರಪಂಚದ ಉದ್ಯಾನವನ, ಟೊಳ್ಳಾದ ಪರ್ವತಗಳ ಹಾದಿಯಲ್ಲಿ: ಅದನ್ನು ವಶಪಡಿಸಿಕೊಂಡು ಟಬ್‌ಗೆ ಮುಳುಗಿಸಲಾಗುತ್ತದೆ. ಗಂಧಕದಿಂದ ವಿಷಪೂರಿತ ನೀರನ್ನು ಕುಡಿಯಲು ಒತ್ತಾಯಿಸಲಾಗುತ್ತದೆ” ಎಂಬ ಅವರ ಹೇಳಿಕೆಯನ್ನು ಪ್ರವಾಹ ಹಾಗೂ ಜ್ವಾಲಾಮುಖಿ ಎಂದು ಅರ್ಥೈಸಲಾಗಿದೆ.

Related Posts

Leave a Reply

Your email address will not be published. Required fields are marked *