ಬೆಂಗಳೂರು ಹೊರವಲಯದ ಸೂರ್ಯಸಿಟಿ ಸಮೀಪದ ಹಳೆ ಚಂದಾಪುರದಲ್ಲಿ ತಾಯಿಯನ್ನು ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾಲಕ್ಷ್ಮಿ (41) ಕೊಲೆಯಾದ ಮಹಿಳೆ. ರಮೇಶ್ (21) ತಾಯಿಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡವ.
ಚಿತ್ರದುರ್ಗ ಮೂಲದ ಚಳ್ಳಕೆರೆಯ ಈ ಕುಟುಂಬ ಕೆಲವು ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದು ಕೂಲಿ ಮಾಡುತ್ತಿತ್ತು. ಮಗ ರಮೇಶ್ ದಿನ ನಿತ್ಯ ಕುಡಿದು ಬಂದು ತಾಯಿ ಜೊತೆ ಜಗಳ ಮಾಡುತ್ತಿದ್ದ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮೊಬೈಲ್ ಚಾರ್ಜರ್ ವೈರ್ನಿಂದ ತಾಯಿಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.
ತಾಯಿಯ ಪ್ರಾಣ ಹೋದ ಬಳಿಕ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಮತ್ತು ಬೆಂಗಳೂರು ಗ್ರಾಮಾಂತರ ಎಎಸ್‌ಪಿ ನಾಗೇಶ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.