ಫರೀದಾಬಾದ್‌ನ ಅಜಯ್‌ನಗರದಲ್ಲಿ ಕಳ್ಳತನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಗನೊಬ್ಬ ಬೆಂಕಿ ಹಚ್ಚಿ ತಂದೆಯನ್ನೇ ಜೀವಂತ ಸುಟ್ಟು ಹಾಕಿದ್ದಾನೆ. ಮುಹಮ್ಮದ್ ಅಲೀಮ್ ಮಗನಿಂದ ಬೆಂಕಿಗಾಹುತಿಯಾದವರು.
ತನ್ನ ಜೇಬಿನಿಂದ ಹಣ ಕದ್ದಿರುವುದಕ್ಕೆ ಗದರಿಸಿದ್ದಕ್ಕಾಗಿ 14 ವರ್ಷದ ಮಗ ತಂದೆಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಮನೆಯ ಮಾಲೀಕ ರಿಯಾಝುದ್ದೀನ್ ದೂರು ನೀಡಿದ್ದು, ಬೆಳಗಿನ ಜಾವ 2 ಗಂಟೆಗೆ ಮುಹಮ್ಮದ್ ಅಲೀಮ್ ಅವರ ಕಿರುಚಾಟ ಕೇಳಿ ಇದ್ದಕ್ಕಿದ್ದಂತೆ ಎಚ್ಚರಗೊಂಡಾಗ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಅಲೀಮ್ ವಾಸಿಸುತ್ತಿದ್ದ ಬಾಡಿಗೆ ಕೋಣೆಯ ಟೆರೇಸ್‌ಗೆ ಹೋಗಲು ಪ್ರಯತ್ನಿಸಿದಾಗ ಬಾಗಿಲು ಲಾಕ್ ಆಗಿತ್ತು. ನೆರೆಹೊರೆಯವರ ಸಹಾಯದಿಂದ ಟೆರೇಸ್ ತಲುಪಿದಾಗ ಕೋಣೆಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದೆ. ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು ಮತ್ತು ಅಲೀಮ್ ಒಳಗಿನಿಂದ ಕಿರುಚುತ್ತಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಬಾಗಿಲು ತೆರೆದ ತಕ್ಷಣ ಸುಟ್ಟ ಗಾಯಗಳಿಂದ ಅಲೀಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಕಿ ಹಚ್ಚಿದ್ದ ಬೇರೊಬ್ಬರ ಮನೆಗೆ ಹಾರಿ ತಪ್ಪಿಸಿಕೊಂಡಿದ್ದ. ಬಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಮಿರ್ಜಾಪುರದ ಮೂಲದ ಅಲೀಮ್ ಮಗನೊಂದಿಗೆ ಫರಿದಾಬಾದ್‌ಗೆ ಬಂದು ಅಜಯ್ ನಗರ ಭಾಗ 2 ರಲ್ಲಿರುವ ರಿಯಾಝುದ್ದೀನ್ ಅವರ ಮನೆಯ ಟೆರೇಸ್‌ನಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದು ವಾಸವಿದ್ದರು. ಮಾರುಕಟ್ಟೆಗಳಲ್ಲಿ ಸೊಳ್ಳೆ ಪರದೆಗಳು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಲೀಮ್ ಧಾರ್ಮಿಕ ಸ್ಥಳಗಳಿಗೆ ದೇಣಿಗೆ ಸಂಗ್ರಹಿಸುತ್ತಿದ್ದರು. ಅವರ ಪತ್ನಿ ಹಲವು ವರ್ಷಗಳ ಹಿಂದೆ ಮೃತರಾಗಿದ್ದು, ನಾಲ್ವರು ವಿವಾಹಿತ ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.