Menu

ಅಂದು ರಸ್ತೆಯಲ್ಲಿದ್ದ ಅನಾಥ ಹೆಣ್ಣು ಮಗುವೇ ಇಂದು ಸಾಕು ತಾಯಿಯ ಕೊಲೆಗಾರ್ತಿ

ರಸ್ತೆಯಲ್ಲಿ ದಿಕ್ಕಿಲ್ಲದೆ ಅನಾಥವಾಗಿ ಬಿದ್ದಿದ್ದ ಮೂರು ವರ್ಷದ ಹೆಣ್ಣುಮಗುವನ್ನು ತಂಂದು ಸಾಕಿ ಬೆಳೆಸಿದ ಮಹಿಳೆಯನ್ನು ಅದೇ ಬಾಲಕಿ ಕೊಲೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

54 ವರ್ಷದ ರಾಜಲಕ್ಷ್ಮೀ ಕೌರ್ ಕೊಲೆಯಾದ ಮಹಿಳೆ. ರಾಜಲಕ್ಷ್ಮೀ 10 ವರ್ಷ ಸಾಕಿ ಬೆಳೆಸಿದ ಬಾಲಕಿಗೆ ಈಗ 13 ವರ್ಷ, ಆಕೆ ಇಬ್ಬರು ಸ್ನೇಹಿತರ ಜೊತೆಗೂಡಿ ತಾಯಿಯನ್ನು ಹತ್ಯೆ ಮಾಡಿದ್ದಾಳೆ.

ಗಜಪತಿ ಜಿಲ್ಲೆಯ ಪಾರಲಕ್ಕಮುಡಿ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ರಾಜಲಕ್ಷ್ಮಿಗೆ ನಿದ್ದೆ ಮಾತ್ರೆ ನೀಡಿದ ಹಂತಕಿ ಹಾಗೂ ಇಬ್ಬರು ಸ್ನೇಹಿತರು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಇಬ್ಬರು ಯುವಕರ ಜೊತೆ ಸಾಕು ಮಗಳ ಸ್ನೇಹದ ಬಗ್ಗೆ ಅಸಮಾಧಾನ ಹೊಂದಿದ್ದ ರಾಜಲಕ್ಷ್ಮೀ ಅವರಿಂದ ದೂರ ಇರುವಂತೆ ಸೂಚಿಸಿದ್ದರು. ರಾಜಲಕ್ಷ್ಮೀಯ ಆಸ್ತಿಯ ಮೇಲೆ ಕಣ್ಣು ಹಾಕಿದ್ದ ಯುವಕರು ಬಾಲಕಿಯರನ್ನು ಓಲೈಸಿ ಕೊಲೆ ಮಾಡುವ ಸಂಚು ರೂಪಿಸಿದ್ದರು.

ರಾಜಲಕ್ಷ್ಮೀ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರಿಗೆ ಹೇಳಿದ ಬಾಲಕಿ ಹಾಗೂ ಸ್ನೇಹಿತರು ಅಂತ್ಯಕ್ರಿಯೆ ನೆರವೇರಿಸಿದ್ದರು. ಕೊಲೆಯ ಸಂಚು ಮುಚ್ಚಿ ಹೋಗುವ ಹಂತದಲ್ಲಿತ್ತು. ಎರಡು ವಾರಗಳ ನಂತರ ಬಾಲಕಿ ಆಕಸ್ಮಿಕವಾಗಿ ಭುವನೇಶ್ವರದ ಮನೆಯಲ್ಲಿ ಮೊಬೈಲ್ ಬಿಟ್ಟು ಹೋಗಿದ್ದಳು. ರಾಜಲಕ್ಷ್ಮೀಯ ಸೋದರ ಮೊಬೈಲ್ ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇನ್ ಸ್ಟಾಗ್ರಾಂನಲ್ಲಿ ಬಾಲಕಿ ಯುವಕರ ಜೊತೆ ಕೊಲೆ ಮಾಡುವ ರೀತಿ ಬಗ್ಗೆ ಚರ್ಚಿಸಿದ್ದು, ರಾಜಲಕ್ಷ್ಮೀ ಬಳಿ ಇದ್ದ ಒಡವೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೋದರ ಪಾರಲಕ್ಕಮುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಯಲಾಗಿದೆ.

Related Posts

Leave a Reply

Your email address will not be published. Required fields are marked *