Wednesday, November 12, 2025
Menu

ಮಕ್ಕಳನ್ನು ಹುಟ್ಟಿಸುವುದಷ್ಟೆ ಮುಸ್ಲಿಮರ ಕೆಲಸ: ಪ್ರತಾಪ್ ಸಿಂಹ

pratap simha

ಪುರಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದಷ್ಟೆ ಅವರ ಮುಸ್ಲಿಮರ ಕೆಲಸ. ವಿದ್ಯಾವಂತ ಮುಸ್ಲಿಮರು ಭಯೋತ್ಪಾದಕರಾದರೆ ಅವರನ್ನು ಪತ್ತೆ ಹಚ್ಚುವುದು ಹೇಗೆ? ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅಧಿಕಾರಕ್ಕೆ ಬಂದಾಗ ದೇಶದ ಒಳಗೆ ನಡೆದ ಮೊದಲ ದೊಡ್ಡ ಸ್ಫೋಟ ಇದು. ಭಾರತದ ಒಳಗಿನ ಮುಲ್ಲಾ ಗಳೇ ಈ ರೀತಿಯ ಸ್ಫೋಟಕ್ಕೆ ತಯಾರಾಗುತ್ತಿದ್ದಾರೆ ಎಂದರು.

ಮೊದಲು ಭಾರತದೊಳಗೆ ಬಾಂಬ್ ಇಡಲು ಪಾಕಿಸ್ತಾನದಿಂದ ಬರುತ್ತಿದ್ದರು. ಈಗ ನಮ್ಮ ದೇಶದೊಳಗೆ ಭಯೋತ್ಪಾದನೆಗೆ ತಯಾರಾಗಿದ್ದಾರೆ. ದೇಶದ ಒಳಗಡೆ ಇರೋವರೆ ಬಾಂಬ್ ಇಡಲು ಹೊರಟರೆ ಮೋದಿ ಅದನ್ನು ತಡಿಯಲು ಆಗುತ್ತಾ? ಎಂದು ಅವರು ಪ್ರಶ್ನಿಸಿದರು.

‌ದೆಹಲಿ ಬಾಂಬ್ ಸ್ಪೋಟ ಪ್ರಕರಣ ಕುರಿತು ಪ್ರತಿಕ್ರಯಿಸಿ ಮುಸ್ಲಿಂ ವಿದ್ಯಾವಂತರೆ ಭಯೋತ್ಪಾದಕ ರಾಗಿ ಬದಲಾಗುತ್ತಿದ್ದಾರೆ.  ಇದು ಬಹಳ ಅಪಾಯಕಾರಿ. ಮುಸ್ಲಿಮರ ಸಮಸ್ಯೆ ಬಡತನ ಅಲ್ಲ.‌ ಅವರ ಒಳಗಿನ ಧರ್ಮಾದಂತೆ ಅವರ ಮನಃಸ್ಥಿತಿಯೆ ಅವರ ಸಮಸ್ಯೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಇಲಿಯೋ ಹುಲಿಯೋ?

ಸಿಎಂ ಗೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಗದ ಕುರಿತು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಈಗ ಇಲಿಯಾಗಿದ್ದಾರೆಂದು ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯಗೆ ಈ ದೈನಸಿ ಸ್ಥಿತಿ ಬರಬಾರದಿತ್ತು.ವಮೈಸೂರಿಗನಾಗಿ, ಕನ್ನಡಿಗನಾಗಿ ನನಗೆ ಸಿಎಂ ಸ್ಥಿತಿ ಕಂಡು ಬೇಸರವಾಗಿದೆ. ಇಂದಿರಾಗಾಂಧಿ, ಸೋನಿಯಾ ಗಾಂಧಿಯನ್ನೇ ಟೀಕೆ ಮಾಡುತ್ತಿದ್ದ ಸಿದ್ದರಾಮಯ್ಯ ಅವರು ಈಗ ಅವರ ಮೊಮ್ಮಗನ ಪಾದ ಪೂಜೆ ಮಾಡಲು ಸಿದ್ದವಾಗಿರೋದು ಬೇಸರ

ಈಗ ಸಿದ್ದರಾಮಯ್ಯ ಇಲಿಯಾ ಆಗಿದ್ದಾರೆ. ಸಿದ್ದರಾಮಯ್ಯ ಮುಂದೆ ರಾಹುಲ್ ಗಾಂಧಿ ಬಚ್ಚಾ, ಅವನ ಭೇಟಿಗೆ ಗೇಟ್ ನಲ್ಲಿ ಕಾಯುತ್ತಿರುವುದು ನಮಗೆ ಬೇಸರ ತರಿಸಿದೆ ಎಂದರು.

ಹಿಂದೂ ರಾಷ್ಟ್ರ ಆಗಲು ಬಿಡಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ ಇದನ್ನು ಮುಸ್ಲಿಂ ರಾಷ್ಟ್ರ ಮಾಡುತ್ತಾರಾ? ಸಿದ್ದರಾಮಯ್ಯರಂತಹ ನಾಯಕರು ಇರುವಾಗ ದೇಶದ ಒಳಗೆ ಇಂತಹ ಪರಿಸ್ಥಿತಿಯನ್ನು ನಾವು ಎದುರಿಸಲೇ ಬೇಕು. ಸಿದ್ದರಾಮಯ್ಯ ಸರಕಾರದ ಯೋಗ್ಯತೆ ಗೆ ಜೈಲಿನಲ್ಲಿನ ಭಯೋತ್ಪಾದಕನನ್ನೆ ಬಿಗಿ ಹಿಡಲು ಆಗುತ್ತಿಲ್ಲ.

ಇನ್ನೂ ಇವರೇನೂ ಕೇಂದ್ರ ಸರಕಾರದ ಬಗ್ಗೆ ಮಾತಾಡೋದು, ಯುಪಿಎ ಸರಕಾರದಲ್ಲಿ ಸರಣಿ ಬಾಂಬ್ ಸ್ಫೋಟವಾಗಿದೆ ಎಂದು ಅವರು ಹೇಳಿದರು.

Related Posts

Leave a Reply

Your email address will not be published. Required fields are marked *