ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು, ಸಾಬರಿಗೂ ಇದಕ್ಕೂ ಏನು ಸಂಬಂಧವಿದೆ, ಎಸ್‌ಡಿಪಿಐಗೂ ಧರ್ಮಸ್ಥಳಕ್ಕೂ ಏನು ಸಂಬಂಧ, ಯಾಕಾಗಿ ಅವರು ಇಷ್ಟೆಲ್ಲ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದ್ದಾರೆ.
ಕಳೆದ ಒಂದು ತಿಂಗಳಿಂದ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಸ್ಥಳದ್ದೇ ಚರ್ಚೆ ಆಗಿದೆ. ಆದರೆ ಒಂದೂ ಕಡೆಯೂ ಸಣ್ಣ ಮೂಳೆಯೂ ಸಿಗಲಿಲ್ಲ. ಇದೆಲ್ಲ ವ್ಯವಸ್ಥಿತ ಪಿತೂರಿ ಅಂತ ಸ್ಪಷ್ಟವಾಗ್ತಿದೆ. ಅವರೇ ತಮ್ಮನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಒಪ್ಪಿಕೊಂಡಿದ್ದಾರೆ. ತಮಿಳುನಾಡು, ಕೇರಳದವರೂ ಕಂಡ್ರು, ಹೈದ್ರಾಬಾದ್ ಪ್ರತಿಭಟನೆ, ಅಂತರ ರಾಷ್ಟ್ರೀಯ ಸುದ್ದಿ ನೋಡಿದಾಗ ದೊಡ್ಡ ಪಿತೂರಿ ಅನ್ನಿಸುತ್ತದೆ ಎಂದಿದ್ದಾರೆ.
ಪ್ರಕರಣದಲ್ಲಿ ಒಬ್ಬೊಬ್ಬರೂ ಕ್ರಮೇಣ ಬೆತ್ತಲಾಗುತ್ತಿದ್ದಾರೆ. ಹಾಗಾಗಿ ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ಪ್ರಕರಣವನ್ನ ಎನ್‌ಐಎ ಗೆ ವಹಿಸಬೇಕು ಎಂದು ಹೇಳಿದ್ದಾರೆ. ಧರ್ಮಸ್ಥಳ ಪ್ರಕರಣದ ಹಿಂದಿರುವವರನ್ನು ಪತ್ತೆ ಹಚ್ಚಲು ಎಸ್‌ಐಟಿ ರಚಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಪ್ರಕರಣದ ದೂರುದಾರ , ತಲೆಬುರುಡೆಯನ್ನು ತೋರಿಸಿ ಎಸ್‌ಐಟಿ ತನಿಖೆಗೆ ಕಾರಣನಾಗಿದ್ದ ಮುಸುಕುಧಾರಿ ವ್ಯಕ್ತಿಯನ್ನು ಸಾರ್ವಜನಿಕವಾಗಿ ಮುಸುಕು ತೆಗೆಸಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.