Menu

ಏಪ್ರಿಲ್ ನಿಂದ ದೇಶದ ಜನಗಣತಿ ಪ್ರಾರಂಭ

population

ನವದೆಹಲಿ:ಕಳೆದ 2011ರ ಬಳಿಕ ಇದೇ ಮೊದಲ ಬಾರಿಗೆ ದೇಶದ ಜನಗಣತಿಯು ಬರುವ ಏಪ್ರಿಲ್ ತಿಂಗಳಲ್ಲಿ ಪ್ರಾರಂಭಿಸಲಾಗುತ್ತದೆ.

2027ರ ಮೊದಲ ಹಂತದ ಜನಗಣತಿ ಕಾರ್ಯ ಏಪ್ರಿಲ್ ನಿಂದ ಸೆಪ್ಟೆಂಬ‌ರ್ ತಿಂಗಳವರೆಗೆ ನಡೆಸಲಾಗುತ್ತದೆ. ಈ ಬಾರಿ ಎರಡು ಹಂತದಲ್ಲಿ ಗಣತಿ ನಡೆಯಲಿದ್ದು 2026ರ ಏಪ್ರಿಲ್ ನಿಂದ ಸೆಪ್ಟೆಂಬ‌ರ್ ವರೆಗೆ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಹಾಗೂ 2027ರ ಫೆಬ್ರವರಿಯಲ್ಲಿ ಜನಸಂಖ್ಯಾ ಎಣಿಕೆ ಕಾರ್ಯವನ್ನು ನಡೆಸುವುದಾಗಿ ಗೃಹ ಸಚಿವಾಲಯವು ತಿಳಿಸಿದೆ.

ಏಪ್ರಿಲ್ 1 ರಿಂದ ಸೆಪ್ಟೆಂಬರ್ 30ರ ವರೆಗೆ ನಡೆಯುವ ಮೊದಲ ಹಂತದ ಜನಗಣತಿಯಲ್ಲಿ ಮನೆಗಳ ಪಟ್ಟಿ ನಡೆಸಲಾಗುತ್ತದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ದಿಷ್ಟಪಡಿಸಿದ 30 ದಿನಗಳ ಅವಧಿಯಲ್ಲಿ ಜನಗಣತಿ ಕಾರ್ಯ ನಡೆಯಲಿದೆ.

ಮನೆಗಳ ಪಟ್ಟಿ ಕಾರ್ಯಾಚರಣೆಗಳು ಪ್ರಾರಂಭವಾಗುವ ಮೊದಲ 15 ದಿನಗಳ ಅವಧಿಯಲ್ಲಿ ಸ್ವಯಂ ಎಣಿಕೆ ಕಾರ್ಯ ನಡೆಸುವ ಆಯ್ಕೆಯೂ ಇರುತ್ತದೆ ಎಂದು ಈ ಕುರಿತು ಬುಧವಾರ ಅಧಿಸೂಚನೆ ಹೊರಡಿಸಿರುವ ಭಾರತದ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್, ತಿಳಿಸಿದ್ದಾರೆ.

2011ರ ಬಳಿಕ 2021ರಲ್ಲಿ ಜನಗಣತಿ ಕಾರ್ಯ ನಡೆಯಬೇಕಿತ್ತು. ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದಾಗಿ ಜನಗಣತಿ ಕಾರ್ಯವನ್ನು ಮುಂದೂಡಲಾಗಿತ್ತು. ಈ ಬಾರಿ ದೇಶದ ಜನಗಣತಿಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತದೆ. 2026ರ ಏಪ್ರಿಲ್ ನಿಂದ ಸೆಪ್ಟೆಂಬ‌ರ್ ವರೆಗೆ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಹಾಗೂ 2027ರ ಫೆಬ್ರವರಿಯಲ್ಲಿ ಜನಸಂಖ್ಯಾ ಗಣತಿ ಕಾರ್ಯ ನಡೆಯಲಿದೆ. ಮನೆಗಳ ಪಟ್ಟಿ ಮತ್ತು ವಸತಿ ಗಣತಿಯು ಜನಸಂಖ್ಯಾ ಗಣತಿಯನ್ನು ನಡೆಸಲು ವ್ಯವಸ್ಥಿತ ಪಟ್ಟಿಯನ್ನು ನಿರ್ಮಿಸುವ ಕಾರ್ಯವಾಗಿದೆ ಹೇಳಿದ್ದಾರೆ.

ಸ್ವಯಂ ಗಣತಿ ಆಯ್ಕೆಗೂ ಇದರಲ್ಲಿ ಅವಕಾಶವಿದ್ದು, ಇದಕ್ಕಾಗಿ 30 ದಿನಗಳ ಮನೆ ಮನೆಗಳ ಪಟ್ಟಿ ಕಾರ್ಯಾಚರಣೆಗಳು ಪ್ರಾರಂಭವಾಗುವ ಮೊದಲ 15 ದಿನಗಳ ಅವಧಿಯಲ್ಲಿ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಬಾರಿಯ ಜಾತಿ ಮತ್ತು ಜನಸಂಖ್ಯಾ ಗಣತಿ ಕಾರ್ಯವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಸಮಗ್ರ ಜಾತಿ ಆಧಾರಿತ ಗಣತಿಯನ್ನು ಕೊನೆಯದಾಗಿ 1881 ಮತ್ತು 1931 ರ ನಡುವೆ ಬ್ರಿಟಿಷರು ಮಾಡಿದ್ದರು. ಸ್ವಾತಂತ್ರ್ಯದ ಅನಂತರ ನಡೆಸಲಾದ ಎಲ್ಲಾ ಜನಗಣತಿ ಕಾರ್ಯಾಚರಣೆಗಳಿಂದ ಜಾತಿಯನ್ನು ಹೊರಗಿಡಲಾಗಿತ್ತು. ಆದರೆ ಮುಂಬರುವ ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಕಳೆದ ವರ್ಷ ತೆಗೆದುಕೊಂಡಿತ್ತು.

2011ರ ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆ 1,210.19 ಮಿಲಿಯನ್ ಆಗಿದ್ದು, ಅದರಲ್ಲಿ 623.72 ಮಿಲಿಯನ್ ಪುರುಷರು ಮತ್ತು 586.46 ಮಿಲಿಯನ್ ಮಹಿಳೆಯರಿದ್ದರು. ಈ ಬಾರಿ 30 ಲಕ್ಷ ಗಣತಿದಾರರು ಮೊದಲ ಬಾರಿಗೆ ಡಿಜಿಟಲ್ ಜನಗಣತಿ ಕಾರ್ಯ ನಡೆಸಲಿದ್ದಾರೆ.

Related Posts

Leave a Reply

Your email address will not be published. Required fields are marked *