Menu

ರಾಗಿ, ಭತ್ತ ಸೇರಿ 14 ಖಾರೀಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ ಕೇಂದ್ರ!

ನವದೆಹಲಿ: ರಾಗಿ, ಜೋಳ, ಭತ್ತ ಸೇರಿದಂತೆ 14 ಖಾರೀಫ್ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ದೇಶಾದ್ಯಂತ ಮುಂಗಾರು ಮಳೆಯ ಆರ್ಭಟ ಆರಂಭವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 14 ಖಾರೀಫ್ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿದೆ. ರಾಗಿಗೆ ಗರಿಷ್ಠ ಶೇ.3ರಷ್ಟು ಹೆಚ್ಚಳ ಹಾಗೂ ಹೆಸರುಬೇಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.

ರಾಗಿಗೆ ಗರಿಷ್ಠ ಶೇ.13.89 ಅಂದರೆ ಕ್ವಿಂಟಲ್ ಗೆ 4886 ರೂ. ನಿಗದಪಡಿಸಲಾಗಿದೆ. ರಾಗಿ ಶೇ.0.51ರಷ್ಟು ಮಾತ್ರ ದೇಶದಲ್ಲಿ ಬೆಳೆಯಾಗುತ್ತಿದ್ದು, ಪ್ರಮುಖವಾಗಿ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ನಂತರದ ಸ್ಥಾನದಲ್ಲಿ ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ರಾಗಿ ಬೆಳೆಯಲಾಗುತ್ತದೆ. ಜೋಳವನ್ನು ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ರಾಜಸ್ಥಾನ್, ಗುಜರಾತ್ ನಲ್ಲಿ ಬೆಳೆಯಲಾಗುತ್ತದೆ.

ರೈತರ ಬೆಳೆಯ ಖರ್ಚಿನ ಮೇಲೆ ಶೇ.50ರಷ್ಟು ಲಾಭ ಬರುವಂತೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿ ಮಾಡಿದ್ದು, 2.07 ಲಕ್ಷ ಕೋಟಿ ರೂಪಾಯಿ ರೈತರ ಬೆಳೆಗಳನ್ನು ಖರೀದಿ ಮಾಡಲಾಗುತ್ತಿದೆ.

ಖಾರಿಫ್ ಬೆಳೆಗಳು ಮುಂಗಾರು ಬೆಳೆಗಳಾಗಿದ್ದು, ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್, ಅಕ್ಟೋಬರ್ ಮಳೆಗಾಲದಲ್ಲಿ ಬೆಳೆಯುವ ಬೆಳೆಗಳಿಗೆ ಖಾರಿಫ್ ಎನ್ನಲಾಗುತ್ತೆ. ಆ ನಂತರದಲ್ಲಿ ಬೆಳೆಯುವ ಹಿಂಗಾರು ಬೆಳೆಗಳಿಗೆ ರಬಿ ಎಂದು ಕರೆಯಲಾಗುತ್ತೆ.

ಬೆಂಬಲ ಬೆಲೆ ಕ್ವಿಂಟಾಲ್ ಗೆ

ಭತ್ತ- 2,369 ರೂ.ಗೆ ಏರಿಕೆ

ರಾಗಿ –4,886 ರೂ.ಗೆ ಏರಿಕೆ

ಜೋಳ –2,400 ರೂ.ಗೆ ಏರಿಕೆ

ತೊಗರಿ ಬೇಳೆ –8,000 ರೂ.ಗೆ ಏರಿಕೆ

ಮೀಡಿಯಂ ಹತ್ತಿ – 7,710 ರೂ.ಗೆ ಏರಿಕೆ

ಲಾಂಗ್ ಹತ್ತಿ –8,110 ರೂ.ಗೆ ಏರಿಕೆ

ಹೆಸರು ಬೇಳೆ –7,800 ರೂ.ಗೆ ಏರಿಕೆ

ಹೆಸರು ಕಾಳು –8,768 ರೂ.ಗೆ ಏರಿಕೆ

ಶೇಂಗಾ –7,263 ರೂ.ಗೆ ಏರಿಕೆ

ಸೂರ್ಯಕಾಂತಿ ಬೀಜ –7,721 ರೂ.ಗೆ ಏರಿಕೆ

ಸಾಸಿವೆ –9,846 ರೂ.ಗೆ ಏರಿಕೆ

Related Posts

Leave a Reply

Your email address will not be published. Required fields are marked *