Thursday, January 30, 2025
Menu

ಕುಂಭಮೇಳ ಕಾಲ್ತುಳಿತಕ್ಕೆ ಬಲಿಯಾದ ನಾಲ್ವರ ಮೃತದೇಹ ಬೆಳಗಾವಿಗೆ

ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಉಂಟಾಗಿರುವ ಕಾಲ್ತುಳಿತಕ್ಕೆ ಐವತ್ತಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಬಲಿಯಾಗಿರುವವರಲ್ಲಿ ಬೆಳಗಾವಿಯ ನಾಲ್ವರ ಮೃತದೇಹ ಇಂದು (ಗುರುವಾರ) ಸಂಜೆ ಬೆಳಗಾವಿಗೆ ತಲುಪಲಿದೆ.

ಇಂದೇ ಅಂತ್ಯ ಸಂಸ್ಕಾರ ಕೂಡ ನಡೆಯಲಿದೆ. ಮೃತದೇಹಗಳನ್ನು ಪ್ರಯಾಗ್‌ರಾಜ್‌ ನಿಂದ ದೆಹಲಿಗೆ ತಂದ ಬಳಿಕ ಅಲ್ಲಿಂದ ವಿಮಾನದಲ್ಲಿ ಬೆಳಗಾವಿಗೆ ತರಲಾಗುತ್ತಿದೆ.

ವಡಗಾವಿಯ ‌ನಿವಾಸಿ ಜ್ಯೋತಿ ಹತ್ತರವಾಠ್, ಮೇಘ. ಹತ್ತರವಾಠ್‌, ಶಿವಾಜಿ ನಗರದ ನಿವಾಸಿ‌ ಮಹಾದೇವಿ‌ ಬಾವನೂರ ಹಾಗೂ ಶೆಟ್ಟಿ ‌ಗಲ್ಲಿಯ ನಿವಾಸಿ ಅರುಣ‌ ಕೋಪರ್ಡ್ ಕಾಲ್ತುಳಿತಕ್ಕೆ ಬಲಿಯಾದವರು.

ಕಾಲ್ತುಳಿತದಲ್ಲಿ ರಾಜ್ಯದ ಕೆಲವರು ಗಾಯಗೊಂಡಿರುವ ಮಾಹಿತಿ ಲಭಿಸಿದ ಬಳಿಕ ಸರ್ಕಾರವು ಅವರೆಲ್ಲರನ್ನು ಕ್ಷೇಮವಾಗಿ ರಾಜ್ಯಕ್ಕೆ ಕರೆತರಲು ಅಧಿಕಾರಿಗಳನ್ನು ನಿಯೋಜಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಬುಧವಾರವೇ ಹೇಳಿದ್ದಾರೆ.

ಕಾಲ್ತುಳಿತದಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಹೇಳಿದ್ದಾರೆ.

 

Related Posts

Leave a Reply

Your email address will not be published. Required fields are marked *