ರಾಜಕೀಯ ವೈರಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರ ಹಿಡಿಲು ಮೈತ್ರಿ ಮಾಡಿಕೊಂಡಿದ್ದು, ಮಿತ್ರಪಕ್ಷಗಳ ವಿರೋಧದ ಬೆನ್ನಲ್ಲೇ ಮೈತ್ರಿಯಿಂದ ಹಿಂದೆ ಸರಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಥಾಣೆ ಜಿಲ್ಲೆಯ ಅಂಬೆರ್ನಾಥ್ ಮುನ್ಸಿಪಾಲ್ ಕೌನ್ಸಿಲ್ ನಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸ್ಥಳೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಆದರೆ ಮೈತ್ರಿ ಮಹಾರಾಷ್ಟ್ರದಾದ್ಯಂತ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ಮಿತ್ರಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ತೀವ್ರವಾಗಿ ಖಂಡಿಸಿತು.
ಬಿಜೆಪಿ ಅನಿರೀಕ್ಷಿತ ಬೆಂಬಲದಿಂದ ಕಾಂಗ್ರೆಸ್ ಅಂಬೆರ್ನಾಥ್ ಮುನ್ಸಿಪಾಲ್ ಕೌನ್ಸಿಲ್ ನಲ್ಲಿ ಅಧಿಕಾರ ಹಂಚಿಕೊಂಡಿತು. ಈ ಅನಿರೀಕ್ಷಿತ ಬೆಳವಣಿಗೆಯಿಂದ ವಿಚಲಿತವಾದ ಏಕನಾಥ್ ಶಿಂಧೆ ಬಣ ತೀವ್ರವಾಗಿ ಖಂಡಿಸಿತು.
ಇದೇ ವೇಳೆ ಕಾಂಗ್ರೆಸ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಅಂಬೆರ್ನಾಥ್ ಬ್ಲಾಕ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಪ್ರದೀಪ್ ಪಾಟೀಲ್ ಹಾಗೂ ಆಯ್ಕೆಯಾದ ಎಲ್ಲಾ ಪಾಲಿಕೆ ಸದಸ್ಯರನ್ನು ಪಕ್ಷದ ನಿಯಮ ಉಲ್ಲಂಘನೆ ಆರೋಪದ ಮೇಲೆ ಅಮಾನತುಗೊಳಿಸಿತು.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದಲ್ಲಿ ಮೈತ್ರಿ ನಡೆಯುತ್ತಿದ್ದರೆ. ಅಂಬೆರ್ನಾಥ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಅಂಬೆರ್ನಾಥ್ ವಿಕಾಸ್ ಅಂಗಡಿ ಎಂಬ ಹೆಸರಿನಲ್ಲಿ ಮೈತ್ರಿ ಮಾಡಿಕೊಂಡಿದ್ದವು.
ಚುನಾವಣೆಯಲ್ಲಿ ಬಿಜೆಪಿಯ 14 ಸದಸ್ಯರು ಹಾಗು ಕಾಂಗ್ರೆಸ್ ನ 12 ಸದಸ್ಯರು ಆಯ್ಕೆಯಾಗಿದ್ದರು. ಎನ್ ಸಿಪಿಯ 4 ಮತ್ತು ಪಕ್ಷೇತರ ಒಬ್ಬ ಅಭ್ಯರ್ಥಿ ಗೆಲುವು ಕಂಡಿದ್ದರು. ಒಟ್ಟು 32 ಸ್ಥಾನ ಗೆದ್ದ ಮೈತ್ರಿ ಪಕ್ಷ ಬಿಜೆಪಿ ಅಭ್ಯರ್ಥಿ ತೇಜಶ್ರೀ ಕರಂಜುಲೆ ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿತ್ತು.


