Menu

ಎಲ್‌ಕೆಜಿಯಿಂದ ದ್ವಿತೀಯ ಪಿಯು ಕೆಪಿಎಸ್ ಶಾಲೆಯಲ್ಲಿ ಪಠ್ಯ, ನೋಟ್ ಪುಸ್ತಕ, ಬಿಸಿಯೂಟ

madhu bangarappa

ಕೆಪಿಎಸ್ ಶಾಲೆಯಲ್ಲಿ ಮಕ್ಕಳು ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ 14 ವರ್ಷ ವ್ಯಾಸಂಗ ಮಾಡಬಹುದಾಗಿದೆ, ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ ಪಠ್ಯ ಹಾಗೂ ನೋಟ್ ಪುಸ್ತಕ, ಬಿಸಿಯೂಟ ನೀಡಲಾಗುವುದು. ನೋಟ್ ಬುಕ್ ಕೂಡ ನೀಡುತ್ತಿದ್ದೇವೆ, ಕೆಪಿಎಸ್ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಗೀತ ಹಾಗೂ ದೈಹಿಕ ಶಿಕ್ಷಕರ ನೇಮಕ ಮಾಡಲಾಗು ವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶೇ. ನೂರರಷ್ಟು ಅಂಕ ಪಡೆದ ಶಾಲೆಗಳ ಪ್ರಾಂಶುಪಾಲರಿಗೆ ಗೌರವ ನೀಡಲಾಗುತ್ತಿದೆ. ಒಂದೊಂದು ಶಾಲೆಗಳಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಯೋಜನೆಗೆ ಸಹಕಾರ ನೀಡಿದ ಶಾಲೆಗಳಿಗೆ ಪ್ರೊತ್ಸಾಹ ನೀಡಲಾಗುತ್ತಿದೆ. ಇಲಾಖೆಯಲ್ಲಿ ಹಣದ ಕೊರತೆ ಇಲ್ಲ. ಹಲವು ಯೋಜನೆ ಇಲಾಖೆಯಲ್ಲಿ ಡಿಪಿಆರ್ ಪ್ರೊಸೆಸ್‌ನಲ್ಲಿದೆ ಎಂದು ಹೇಳಿದರು.

ಮಕ್ಕಳು ತಪ್ಪು ಮಾಡಿದರೆ ಮೊದಲ ತಪ್ಪು ತಂದೆ ತಾಯಿಗಳದ್ದು, ಬಳಿಕ ಶಿಕ್ಷಕರದ್ದು, ಸಮಾಜದ್ದಾಗಿರುತ್ತದೆ. ವಿದ್ಯಾರ್ಥಿ ಫೇಲಾದರೆ ಶಾಲೆಯೂ ಕೂಡ ಹೊಣೆ ಹೊರಬೇಕಾಗುತ್ತದೆ. ಸರ್ಕಾರದ ಯೋಜನೆಗಳು ವಿದ್ಯಾರ್ಥಿಗಳಿಗೆ, ರಾಜ್ಯದ ಜನರಿಗೆ ಸಹಾಯವಾಗುವಂತಿರಬೇಕು.ರಾಜ್ಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೇಟ್ ಸ್ಪೀಚ್ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಹೇಟ್ ಸ್ಪೀಚ್ ಕಾಯ್ದೆ ಯನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದನ್ನು ಹಿಡಿದು ಸದನದಲ್ಲಿ ಕೆಲವರು ನನಗೆ ಪ್ರಶ್ನೆ ಮಾಡ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಬರುವುದೆಲ್ಲಾ ನಿಜವೇ ಎಂಬುದನ್ನು ಅರಿಯಬೇಕಿದೆ. ಕರಾವಳಿ ಭಾಗದ ಕೆಲವು ಬಿಜೆಪಿ ಮುಖಂಡರು ಸೇರಿದಂತೆ ಹಲವಾರು ಮುಖಂಡರು ಹೇಟ್ ಸ್ಪೀಚ್ ನಿಂದಲೇ ಬದುಕುತ್ತಿದ್ದಾರೆ. ನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರೇ ಕೈಬಿಟ್ಟಿದ್ದಾರೆ. ಇದರಂತಹ ನೀಚ ಕೆಲಸ ಮತ್ತೊಂದಿಲ್ಲ. ಮಹಾತ್ಮ ಗಾಂಧೀಜಿಯವರು ದುಡಿಯುವ ಕೈಗೆ ಕೆಲಸ ಕೊಡಿ ಎಂದಿದ್ದರು ಎಂದು ತಿಳಿಸಿದರು.

ಅಡಿಕೆ ಸಂಶೋಧನೆಗೆ 45 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂಬ ಸಂಸದ ರಾಘವೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಂಸದ ರಾಘವೇಂದ್ರ ಸುಳ್ಳು ಹೇಳಿದ್ದಾರೆ
ಅಧಿವೇಶನ ಸಂದರ್ಭದಲ್ಲಿ ಮನವಿ ಪತ್ರ ಕೊಡುವುದೇ ಇವರಿಗೆ ಕೆಲಸ. ಮನವಿ ಕೊಟ್ಟು ಫೋಟೋ ಹೊಡೆಸಿಕೊಂಡು ಪತ್ರಿಕೆಗಳಲ್ಲಿ ಹಾಕಿಕೊಳ್ಳೋದು. ಅರ್ಜಿ ಕೊಟ್ಟ ತಕ್ಷಣ ಅಲ್ಲಿ ಕೆಲಸ ಆಗಲ್ಲ.  ವಿಜಯೇಂದ್ರ ಟೋಲ್ ಗೇಟ್ ಬಗ್ಗೆ ಹೋರಾಟ ಮಾಡಿ ಮನವಿ ಕೊಟ್ಟಿದ್ದಾರೆ. ಅವರೇ ಅವರ ಸರ್ಕಾರದ ಅವಧಿಯಲ್ಲಿ ಟೋಲ್ ಗೇಟ್ ನಿರ್ಮಿಸಿದ್ದಾ. ಈಗ ಅವರೇ ಹೋಗಿ ಮನವಿ ಕೊಡ್ತಾರೆ. ಟೋಲ್ ಗೇಟ್ ನಿರ್ಮಾಣದಿಂದ ಶಿಕಾರಿಪುರದವರಿಗೆ ಬಹಳ ತೊಂದರೆಯಾಗಿದೆ. ವಿಜಯೇಂದ್ರ ಅವರಿಗೆ ನಾಚಿಕೆಯಾಗಬೇಕು ಎಂದರು.

ಬಿಜೆಪಿಯವರು ಸಚಿವೆ ಲಕ್ಷ್ಮಿ ಹೆಬ್ವಾಳ್ಕರ್ ಅವರಿಗೆ ಸದನದಲ್ಲಿ ಅವಮಾನ ಮಾಡಿದ್ರು, ಸರಿಯಾಗಿ ಹೇಳಿದ್ರೂ ಕೂಡ ಅವರಿಗೆ ಅವಮಾನಿಸಲಾಯ್ತು, ಅವರು ಕಣ್ಣೀರು ಹಾಕಿದ್ರು, ಅಧಿಕಾರಿಗಳು ನನಗೆ ಗೊಂದಲ ಮಾಡಿದ್ರು ಅಂತಾ ಹೇಳಿದ್ರು. ಗೃಹಲಕ್ಷ್ಮಿ ಯೋಜನೆಗೆ ವಿರೋಧ ಮಾಡಿದ ಬಿಜೆಪಿಯವರೇ ಇವತ್ತು ಹಣ ಬಂದಿಲ್ಲವೆಂದು ಆರೋಪಿಸುತ್ತಿದ್ದಾರೆ. ನಮ್ಮ ಸರ್ಕಾರದ ಯೋಜನೆಗೆ ಅವರೇ ಮೊದಲು ಹೋಗಿ ಅರ್ಜಿ ಹಾಕ್ತಾರೆ. ಇವರೆಲ್ಲ ಹೋಗಿ ಎಂ.ಎಸ್.ಪಿ. ಬಗ್ಗೆ ಕೇಳಲಿ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡದಿರುವುದು ನಿಜಕ್ಕೂ ಕೇಂದ್ರದ ವೈಫಲ್ಯ ಎಂದು ಕಿಡಿ ಕಾರಿದ್ದಾರೆ.

ಶಿವಮೊಗ್ಗ ಕಮಿಷನೆರೇಟ್ ಮಾಡಬೇಕೆಂಬ ಪ್ರಸ್ತಾಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಗಾಂಜಾ, ಅಫೀಮು, ಅನೈತಿಕ ಚಟುವಟಿಕೆ ಬಗ್ಗೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾಗಿ ತಿಳಿಸಿದರು. ಕಮಿಷನರೇಟ್ ಮಾಡುವ ಹೊರತಾಗಿಯೂ ಇದಕ್ಕೆಲ್ಲಾ ಕಡಿವಾಣ ಹಾಕಲು ನಾನು ಸೂಚಿಸಿದ್ದೆನೆ ಎಂದರು.

Related Posts

Leave a Reply

Your email address will not be published. Required fields are marked *