ನವದೆಹಲಿ: ಕೆಂಪುಕೋಟೆಯಲ್ಲಿ ಕಾರು ಸ್ಫೋಟ ಪ್ರಕರಣದ ಉಗ್ರರು 32 ಕಾರುಗಳನ್ನು ಸ್ಫೋಟಗೊಳಿಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸೇಡು ತೀರಿಸಿಕೊಳ್ಳಲು 16ನೇ ವರ್ಷಾಚರಣೆ ದಿನ ಸರಣಿ ಕಾರು ಸ್ಫೋಟ ನಡೆಸಲು 32 ಕಾರುಗಳನ್ನು ಉಗ್ರರು ಸಜ್ಜುಗೊಳಿಸಿದ್ದರು ಎಂಬ ತನಿಖೆ ವೇಳೆ ತಿಳಿದು ಬಂದಿದೆ.
ದೆಹಲಿಯ ಕೆಂಪುಕೋಟೆಯಲ್ಲಿ ಉಗ್ರರು ನಾಲ್ಕು ಕಾರುಗಳ ಮೂಲಕ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ್ದು, ಒಂದು ಮಾತ್ರ ಸ್ಫೋಟಗೊಂಡಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬಂದ ಮಾಹಿತಿ ಪ್ರಕಾರ 32 ಕಾರುಗಳಲ್ಲಿ ಸ್ಫೋಟಕ ತುಂಬಿ ಸರಣಿ ಸ್ಫೋಟ ನಡೆಸುವ ಮೂಲಕ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಲಾಗಿತ್ತು ಎಂಬದು ತಿಳಿದು ಬಂದಿದೆ.
ಕೆಂಪುಕೋಟೆಯಲ್ಲಿ ಎರಡು ದಿನಗಳ ಹಿಂದೆ ಸಂಭವಿಸಿದ ಕಾರು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ತನಿಖೆ ನಡೆಸುತ್ತಿರುವ ಎನ್ ಐಎ ಹಾಗೂ ಪೊಲೀಸರು ಕಾರು ಸ್ಫೋಟಗೊಂಡ ಪ್ರಕರಣದಲ್ಲಿ ಎರಡು ಕಾರುಗಳು ಎಂದು ಶಂಕಿಸಿದ್ದರು.
ತನಿಖೆ ವೇಳೆ ಇದೀಗ ಉಗ್ರರು ಸ್ಫೋಟಕ್ಕೆ ಬಳಸಿದ ನಾಲ್ಕು ಕಾರುಗಳನ್ನು ತನಿಖಾಧಿಕಾರಿಗಳು ಗುರುತು ಪತ್ತೆ ಹಚ್ಚಿದ್ದಾರೆ. ಹೈಂಡುವಿ ಐ20 ಕಾರು ಸ್ಫೋಟಗೊಂಡಿತ್ತು. ಕೆಂಪು ಎಸಿಸ್ಫೋಟ್ಸ್ ಎಸ್ ಯುವಿ ಕಾರು ಬೆನ್ನಟ್ಟಿದ್ದ ತನಿಖಾ ಸಂಸ್ಥೆ ಇದೀಗ ಬಿಳಿ ಮತ್ತೊಂದು ಕಾರಿನ ಸುಳಿವು ಪಡೆದಿದ್ದು, ಅವುಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ.
ಉಳಿದ ಮೂರು ಕಾರುಗಳ ಪೈಕಿ ಫೋರ್ಡ್ ಎಕೊ ಸ್ಫೋರ್ಟ್ಸ್ ಹರಿಯಾಣದ ಖಾಂಡೇವಾಲಿ ಫಾರ್ಮ್ಸ್ ಹೌಸ್ ನಲ್ಲಿ ಪತ್ತೆಯಾಗಿತ್ತು. ಉಳಿದೆರಡು ಮಾರುತಿ ಸುಜುಕಿ ಬ್ರೆಜಾ ಮತ್ತು ಮಾರುತಿ ಶಿಫ್ಟ್ ಡಿಜೈರ್ ಗಳಲ್ಲಿ ಕೂಡ ಸ್ಫೋಟಕ ಸಾಗಿಸಲಾಗಿತ್ತು ಎಂದು ತಿಳಿದು ಬಂದಿದೆ.
ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಂಡ ದಿನದಂದು ದೇಶದ ಹಲವೆಡೆ 6 ಕಡೆ ಬಾಂಬ್ ಸರಣಿ ಬಾಂಬ್ ಸ್ಫೋಟಗೊಳಿಸಲು ಸಂಚು ರೂಪಿಸಲಾಗಿತ್ತು. ಇದರಲ್ಲಿ ಕೆಂಪುಕೋಟೆ ಅಲ್ಲದೇ ಅಯೋಧ್ಯೆ ಸೇರಿದಂತೆ 6 ಕಡೆ ಸ್ಥಳ ಗುರುತಿಸಲಾಗಿತ್ತು ಎಂದು ತಿಳಿದು ಬಂದಿದೆ.
ಉಗ್ರರು ಸ್ಫೋಟಕ್ಕೆ ಹಳೆಯ ಕಾರುಗಳನ್ನೇ ಆಯ್ಕೆ ಮಾಡಿಕೊಂಡಿದ್ದು, ಹಲವು ಬಾರಿ ಮಾರಾಟಗೊಂಡಿರುವ ಕಾರಣ ಈ ಕಾರುಗಳ ಗುರುತು ಪತ್ತೆ ಕಠಿಣ ಹಾಗೂ ಸುಲಭವಾಗಿ ತಮ್ಮ ಕಾರ್ಯ ಸಾಧಿಸಬಹುದು ಎಂದು ಕಾರಣಕ್ಕೆ ಈ ತಂತ್ರಗಳನ್ನು ಬಳಸಿದ್ದರು ಎನ್ನಲಾಗಿದೆ.


